ದೆಹಲಿ ಮೀರಿಸಿದ ಚೆನ್ನೈ!

ದೆಹಲಿ ಮೀರಿಸಿದ ಚೆನ್ನೈ!

ಚೆನ್ನೈ, ನ. 7 : ರಾಷ್ಟ್ರದ ರಾಜ್ಯಧಾನಿ ದೆಹಲಿಯಲ್ಲಿ ವಿಪರೀತವಾಗಿ ವಾಯು ಮಾಲಿನ್ಯ ಕಾಣಿಸಿಕೊಂಡಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಹಿನ್ನಲೆ ಉಸಿರಾಡಲೂ ಕಷ್ಟ. ಆದರೆ, ಇದೀಗ ದೇಶದ ಎರಡನೇ ವಾಹನ ರಾಜಧಾನಿ ಎಂಬ ಬಿರುದು ಪಡೆದುಕೊಂಡಿರುವ ಚೆನ್ನೈ ವಾಯುಮಾಲಿನ್ಯದಲ್ಲಿ ದೆಹಲಿಯನ್ನು ಮೀರಿಸಿದೆ.
ಚೆನ್ನೈ ನಗರದ ವಾಯುಮಾಲಿನ್ಯದ ಮಟ್ಟ 264ಕ್ಕೆ ತಲುಪಿದೆ. ರಾಜಧಾನಿ ದೆಹಲಿಯ ವಾಯುಮಾಲಿನ್ಯದ ಮಟ್ಟ 254 ದಾಖಲಾಗಿದೆ.
ತಮಿಳುನಾಡಿನ ಸೇರಿದಂತೆ ವೇಲಾಚೆರಿ, ರಾಮಪುರಂ, ಮನಾಲಿ, ಕೊಡುಂಗೈಯುರ್, ಅಣ್ಣ ನಗರ, ಚೆನ್ನೈ ವಿಮಾನ ನಿಲ್ದಾಣ ರಸ್ತೆಗಳಲ್ಲಿ ವಾಯುಮಾಲಿನ್ಯದ ಮಟ್ಟ 341ಕ್ಕೆ ತಲುಪಿರುವುದು ಕಂಡು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos