ಡೆಲ್ಲಿ ಕ್ಯಾಪಿಟಲ್ಸ್‌ ಅಬ್ಬರಕ್ಕೆ ತತ್ತರಿಸಿದ ಗುಜರಾತ್‌

ಡೆಲ್ಲಿ ಕ್ಯಾಪಿಟಲ್ಸ್‌ ಅಬ್ಬರಕ್ಕೆ ತತ್ತರಿಸಿದ ಗುಜರಾತ್‌

ಬೆಂಗಳೂರು: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ 2024ರ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಅತಿ ದೊಡ್ಡ ಗೆಲುವು ದಾಖಲಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ರನ್‌ ಕಲೆ ಹಾಕಲು ಪರದಾಟ ನಡೆಸಿತು. ಗುಜರಾತ್‌ ತಂಡ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 8.5 ಓವರ್‌ಗಳಲ್ಲಿ 4 ವಿಕೆಟ್‌ಗೆ 92 ರನ್‌ ಸೇರಿಸಿ ಅಬ್ಬರಿಸಿತು. ಈ ಜಯದ ಮೂಲಕ ರಿಷಭ್‌ ಪಂತ್ ಪಡೆ 6 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಬಡ್ತಿ ಪಡಿಯಿತು. ಗುಜರಾತ್ ಸಹ ಏಳು ಪಂದ್ಯಗಳಲ್ಲಿ ಆರು ಅಂಕ ಕಲೆ ಹಾಕಿ ಏಳನೇ ಸ್ಥಾನದಲ್ಲಿದೆ.

ಮುಕೇಶ್‌ ಅಬ್ಬರ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದೆಹಲಿ ಕ್ಯಾಪಿಟಲ್ಸ್ ಬೌಲರ್‌ಗಳ ವಿರುದ್ಧ ಗುಜರಾತ್ ಟೈಟಾನ್ಸ್‌ನ ಇಡೀ ತಂಡ 20 ಓವರ್‌ಗಳ ಬ್ಯಾಟಿಂಗ್ ಮಾಡಲು ಸಹ ಬಿಡಲಿಲ್ಲ. ಗುಜರಾತ್‌ 17.3 ಓವರ್‌ಗಳಲ್ಲಿ ಆಲೌಟ್ ಆಯಿತು. ಮುಖೇಶ್ ಕುಮಾರ್ ಗರಿಷ್ಠ 3 ವಿಕೆಟ್ ಪಡೆದರು.

ಗುಜರಾತ್ ತಂಡದ ಪರ ರಶೀದ್ ಖಾನ್‌ 31 ರನ್‌ ಗಳ ಇನ್ನಿಂಗ್ಸ್ ಆಡಿದರು. ಒಂದು ವೇಳೆ ಇವರು ಸಹ ಸಿಂಗಲ್‌ ಡಿಜಿಟ್‌ನಲ್ಲಿ ಕೆಲಸ ಮುಗಿಸಿದ್ದರೆ, ಅಲ್ಪ ಮೊತ್ತಕ್ಕೆ ಆತಿಥೇಯ ತಂಡ ಕುಸಿಯುತ್ತಿತ್ತು. ಮಧ್ಯಮ ಕ್ರಮಾಂಕದ ರಾಹುಲ್ ತೆವಾಟಿಯಾ 10, ಸಾಯಿ ಸುದರ್ಶನ 12 ರನ್‌ ಸಿಡಿಸಿದರು. ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಗರಿಷ್ಠ 20 ರನ್ ಗಳಿಸಿದರು. ಆದರೆ, ಶಾಯ್ ಹೋಪ್ 19 ರನ್ ಕೊಡುಗೆ ನೀಡಿದರು. ರಿಷಬ್ ಪಂತ್ 16 ರನ್ ಗಳಿಸಿ ಅಜೇಯರಾಗಿ ಮರಳಿದರು ಮತ್ತು ಅಭಿಷೇಕ್ ಪೊರೆಲ್ ಕೂಡ 15 ರನ್ ಕೊಡುಗೆ ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos