ದೀಪಿಕಾ ರಾಜಕೀಯ ಬಗ್ಗೆ ಅಧ್ಯಯನ ಮಾಡಲಿ

ದೀಪಿಕಾ ರಾಜಕೀಯ ಬಗ್ಗೆ ಅಧ್ಯಯನ ಮಾಡಲಿ

ಬೆಂಗಳೂರು, ಜ. 14 : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ನಿನ್ನೆ ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿನ್ನೆ ಇಂದೋರ್ನಲ್ಲಿ ಮಾತನಾಡಿದ ಅವರು, ದೀಪಿಕಾ ಅವರು ನಮ್ಮ ದೇಶದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಬೇಕು. ಜ್ಞಾನವನ್ನು ಪಡೆದ ನಂತರವೇ ಅವಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಸರಿಯಾದ ಸಲಹೆಗಾಗಿ ಅವಳು ಸ್ವಾಮಿ ರಾಮದೇವ್ ಅವರಂತಹ ವ್ಯಕ್ತಿಗಳನ್ನು ಸಂಪರ್ಕಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಪರೋಕ್ಷವಾಗಿ ಜೆಎನ್ಯು ವಿದ್ಯಾರ್ಥಿಗಳನ್ನ ಭೇಟಿ ಮಾಡಿರುವುದಕ್ಕೆ ಕಿಡಿಕಾರಿದರು.

ಫ್ರೆಶ್ ನ್ಯೂಸ್

Latest Posts

Featured Videos