ಸತ್ತಂತೆ ಮಲಗಿ ಹುಲಿಯಿಂದ ಬಚಾವ್

ಮಹಾರಾಷ್ಟ್ರ, ಜ. 27 : ಹುಲಿಯಿಂದ ಪಾರಾಗಲು ವ್ಯಕ್ತಿಯೊಬ್ಬ ಸತ್ತಂತೆ ನಟಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ವ್ಯಕ್ತಿಯ ಸಮಯಪ್ರಜ್ಞೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಭಂದಾರಾ ಜಿಲ್ಲೆಯು ಕಳೆದ ಶನಿವಾರ ಮಾನವ-ಪ್ರಾಣಿ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ವ್ಯಕ್ತಿಯೊಬ್ಬ ಹುಲಿ ಬಾಯಿಯಿಂದ ಉಪಾಯದಿಂದ ಪಾರಾಗಿರುವ ಸನ್ನಿವೇಶವಂತೂ ಮೈ-ನವಿರೇಳಿಸುವಂತೆ ಮಾಡುತ್ತದೆ.
ಕಾಡಿನಿಂದ ನಾಡಿಗೆ ಬಂದ ಹುಲಿಯೊಂದನ್ನು ಓಡಿಸಲು ಗ್ರಾಮಸ್ಥರು ಪಟ್ಟ ಹರಸಾಹಸ ಪಟ್ಟಿದ್ದರು, ಈ ವೇಳೆ ಉದ್ರಿಕ್ತಗೊಂಡ ಹುಲಿ ಕೂಡ ಜನರ ಮೇಲೆರಗಿ ದಾಳಿ ಮಾಡಲು ಮುಂದಾಗಿತ್ತು. ಈ ಸಮಯದಲ್ಲಿ ವ್ಯಕ್ತಿಯೊಬ್ಬನನ್ನು ಎಳೆದು ಕೆಳಗೆ ಹಾಕಿದಾಗ ಆತ ಸಮಯಪ್ರಜ್ಞೆ ಮೆರೆದು ಶವದ ರೀತಿಯಲ್ಲಿ ನಟಿಸಿ ಅಲ್ಲೆ ಮಲಗುತ್ತಾನೆ. ಹುಲಿ ಮಾತ್ರ ಆತನ ಮೇಲೆಯೇ ಕುಳಿತಿರುತ್ತದೆ. ಈ ವೇಳೆ ಗ್ರಾಮಸ್ಥರು ಕಲ್ಲುಗಳನ್ನು ಎಸೆದಾಗ ಹುಲಿ ಗಾಬರಿಗೊಂಡು ಓಡಿ ಹೋಗುತ್ತದೆ. ಅದು ಹೋದಂತೆಯೇ ಸತ್ತಂತೆ ಮಲಗಿದ್ದ ವ್ಯಕ್ತಿ ಸಾವಿನ ದವಡೆಯಿಂದ ಪಾರಾದಂತೆ ನಿಟ್ಟುಸಿರು ಬಿಟ್ಟು ಏಳುತ್ತಾನೆ.

ಫ್ರೆಶ್ ನ್ಯೂಸ್

Latest Posts

Featured Videos