ನಟ ಪ್ರಭಾಸ್ ಮನೆಯ ಮುಂದೆ ಜಪಾನ್ ಯುವತಿಯರ ಡ್ಯಾನ್ಸ್

ನಟ ಪ್ರಭಾಸ್ ಮನೆಯ ಮುಂದೆ ಜಪಾನ್ ಯುವತಿಯರ ಡ್ಯಾನ್ಸ್

ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್ :   ಬಾಹುಬಲಿ ನಾಯಕ ಪ್ರಭಾಸ್ ಮನೆಯ ಮುಂದೆ ಜಪಾನ್ ಮೂಲದ ಯುವತಿಯರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯರು ಹೈದರಾಬಾದ್‌ನ ಪ್ರಭಾಸ್ ಮನೆ ಮುಂದೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್‌‌ಗೆ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಮನೆಯ ಗೇಟ್ ಮುಂದೆ ನಿಂತು ಫೋಟೋಗಳಿಗೆ ಪೋಸ್ ನೀಡಿದ್ದಾರೆ. . ಪ್ರಭಾಸ್ ನಟಿಸಿರುವ ಸೆನ್ಸೇಷನಲ್ ಬಾಹುಬಲಿ ಸಿನಿಮಾಗಳು ಜಪಾನ್‌ ಪ್ರೇಕ್ಷಕರನ್ನೂ ರಂಜಿಸಿದ್ದವು. ಹಾಗಾಗಿ ಅಲ್ಲೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಬಾಹುಬಲಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸ್ವತಃ ಚಿತ್ರತಂಡ ಅಲ್ಲಿಗೆ ಭೇಟಿ ನೀಡಿ ಪ್ರಚಾರ ಮಾಡಿತ್ತು. ಹಾಗಾಗಿ ಪ್ರಭಾಸ್ ಅಭಿಮಾನಿಗಳ ಸಂಖ್ಯೆ ಅಲ್ಲೂ ಹೆಚ್ಚಾಗಿದೆ. ಇದೀಗ ಜಪಾನ್‌ನಿಂದ ಹೈದರಾಬಾದಿಗೆ ಬಂದಿರುವ ಪ್ರಭಾಸ್ ಫ್ಯಾನ್ಸ್ ಅವರನ್ನು ಭೇಟಿ ಮಾಡಲು ಮನೆಗೆ ಭೇಟಿ ನೀಡಿದ್ದಾರೆ. ಅವರ ಮನೆ ಗೇಟ್ ಮುಂದೆ ಕುಣಿದು, ಕುಪ್ಪಳಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos