ದೇಹಕ್ಕೆ ಡಿ ವಿಟಮಿನ್ ಅತ್ಯಗತ್ಯ

ದೇಹಕ್ಕೆ ಡಿ ವಿಟಮಿನ್ ಅತ್ಯಗತ್ಯ

ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಗಳಲ್ಲಿ ಡಿ.ವಿಟಮಿನ್ ಕೂಡ ಒಂದು. ಇದನ್ನು ನಮ್ಮ ದೇಹವೇ ಸೃಷ್ಠಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಬೇಕಾಗುವುದು ಸೂರ್ಯನ ಬೆಳಕು ಮಾತ್ರ (ಸೂರ್ಯ ಕಿರಣಗಳಲ್ಲಿರುವ ಅಲ್ಟ್ರಾವೈಲೆಟ್ ಬಿ ಕಿರಣಗಳು).

ಡಿ. ವಿಟಮಿನ್ ಏಕೆ ಬೇಕು?

· 
ಸ್ನಾಯುಗಳ ಬೆಳವಣಿಗೆಗೆ ಇದು
ಅತ್ಯವಶ್ಯ.

· 
ಮೂಳೆಗಳಿಗೆ ಕ್ಯಾಲ್ಸಿಯಂ ಹೀರಲು
ಇದು
ಮಧ್ಯವರ್ತಿಯಂತೆ ಕೆಲಸ
ಮಾಡುತ್ತದೆ.

· 
ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ
ಮಾಡುತ್ತದೆ.

· 
ನರಗಳಿಗೆ ಮಾಂಸ
ಖಂಡಗಳಿಗೆ ಚೈತನ್ಯ
ನೀಡುತ್ತದೆ.

· 
ಇದು
ನಮ್ಮ
ದೇಹದ
ರಕ್ತದಲ್ಲಿ ಕ್ಯಾಲ್ಸಿಯಂ ಮತ್ತು
ಪಾಸ್ಪರಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

· 
ಸೋಂಕು
ತಡೆಯುವ
ಬಿಳಿ
ರಕ್ತಕಣಗಳನ್ನು ರಕ್ತದಲ್ಲಿ ಹೆಚ್ಚಿಸುತ್ತದೆ.

ಡಿ.ವಿಟಮಿನ್ ಕೊರತೆಯ ಪ್ರಮುಖ ಲಕ್ಷಣಗಳು:

· 
ವಿಪರೀತ
ಮೈ
ಕೈ
ನೋವು.

· 
ಸ್ನಾಯುಗಳ ಸೆಳೆತ.

· 
ಮೂಳೆಗಳ
ಸಂದು
ಭಾಗದಲ್ಲಿ ಸೂಜಿ
ಚುಚ್ಚಿದಂತೆ ನೋವು.

· 
ಸ್ವಲ್ಪ
ನಡೆದರೂ
ಸುಸ್ತು
ಅನಿಸುತ್ತದೆ.

· 
ದೇಹದಲ್ಲಿ ಡಿ.ವಿಟಮಿನ್ ಕೊರತೆ ಆದರೆ
ಅಳಿದುಳಿದ ಕ್ಯಾಲ್ಸಿಯಂ ಮೂತ್ರಕೋಶದ ಮೂಲಕ
ಹೊರಟು
ಹೋಗಿ
ಮತ್ತಷ್ಟು ಸುಸ್ತು
ಆವರಿಸುತ್ತದೆ.

· 
ಸಂಶೋಧನೆಗಳಿಂದ ತಿಳಿದು
ಬಂದ
ಸಂಗತಿ
ಎಂದರೆ
ಬೊಜ್ಜು
ಇರುವ
ವ್ಯಕ್ತಿಗಳಲ್ಲಿ ಇಸ್ಕಿಮಸ್ ಹಾರ್ಟ್
ಡಿಸೀಜ್
, ಸಕ್ಕರೆ
ಕಾಯಿಲೆ
ಇರುವವರಲ್ಲಿ ಡಿ.ವಿಟಮಿನ್ ಕೊರತೆ ಇರುತ್ತದೆ. ಡಿ.ವಿಟಮಿನ್ ಕೊರತೆ ಇರುವುದರಿಂದಲೇ ಈ
ಎಲ್ಲಾ
ಸಮಸ್ಯೆಗಳು ಉದ್ಭವಿಸುತ್ತಿರಬಹುದೇ ಎಂದು
ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

· 
ಡಿ.ವಿಟಮಿನ್ ಕೊರತೆಯಿಂದ ಮೂಳೆಗಳು ದುರ್ಬಲಗೊಂಡು ಪ್ಯಾಕ್ಚರ್ ಕೂಡ
ಆಗಬಹುದು.

· 
ಚಿಕ್ಕ
ಮಕ್ಕಳಲ್ಲಿ ಡಿ.ವಿಟಮಿನ್ ಕೊರತೆಯಿಂದ ಪೀಡ್ಸ್
ಬರಲು
ಕಾರಣವಾಗಬಹುದು.

· 
ದಂಪತಿಗಳಲ್ಲಿ ಈ
ಸಮಸ್ಯೆ
ಇದ್ದರೆ
ಸಮಾಗಮದಲ್ಲಿ ನೋವು
ಅನಿಸುತ್ತದೆ.

· 
ಡಿ.ವಿಟಮಿನ್ ಕೊರತೆಯಿಂದ ಖಿನ್ನತೆ ಕೂಡ
ಕಾಣಿಸಿಕೊಳ್ಳಬಹುದು.

· 
ಮೆನೋಪಾಸ್ ಆದ
ಮಹಿಳೆಯರಿಗೆ ಬೆನ್ನಿನ ಕೆಳಭಾಗದಲ್ಲಿ ನೋವು
ಕಾಣಿಸಿಕೊಳ್ಳುತ್ತದೆ. ಇದಕ್ಕೆ
ಮುಖ್ಯ
ಕಾರಣ
ಅಂಡಾಶಯದಲ್ಲಿ ಈಸ್ಟ್ರೋಜನ್ ಹಾರ್ಮೊನು ಕಡಿಮೆ
ಆಗಿರುವುದೇ ಕಾರಣ.

· 
ದೇಹದಲ್ಲಿ ಕೊಬ್ಬು
ಕರಗಿಸಲು ಡಿ.ವಿಟಮಿನ್ ಬೇಕು.

· 
ಡಿ.ವಿಟಮಿನ್ ಕೊರತೆಯಿಂದ ದೇಹದಲ್ಲಿ ಕೊಬ್ಬು
ಸಂಗ್ರಹವಾಗುತ್ತ ಹೋಗುತ್ತದೆ.

· 
ಕೆಲವರಲ್ಲಿ ಡಿ.ವಿಟಮಿನ್ ಕೊರತೆಯಿಂದ ಸೋರಿಯಾಸಿಸ್ ಎಂಬ
ಚರ್ಮದ
ಕಾಯಿಲೆ
ಕೂಡ
ಉದ್ಭವಿಸುತ್ತದೆ.

·  ಗರ್ಭಿಣಿಗೆ ಡಿ.ವಿಟಮಿನ್ ಕೊರತೆ ಆದರೆ ಆಕೆಗೆ ಹುಟ್ಟುವ ಮಗು ಮಾನಸಿಕ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆಗೆ ಪರಿಹಾರ: 
ಅನೇಕರು ಸುಸ್ತು ಹಾಗೂ ಬೇರೆ ಬೇರೆ ಸಮಸ್ಯೆಗಳನ್ನು ಹೊತ್ತುಕೊಂಡು ವೈದ್ಯರ ಬಳಿ ಬರುತ್ತಾರೆ. ಅವರ ಲಕ್ಷಣವನ್ನು ಆದರಿಸಿ, ಮಾತ್ರೆ ಔಷಧಿಗಳ ಮೂಲಕ ಸಮಸ್ಯೆ ನೀಗಿಸಲು ಪ್ರಯತ್ನಿಸುತ್ತಾರೆ.

ಗರ್ಭಿಣಿಯರು ಈ ಸಮಸ್ಯೆಗೆ ತುತ್ತಾಗಿದ್ದರೆ, ಅವರಿಗೆ ತಕ್ಷಣದಿಂದಲೇ ಡಿ.ವಿಟಮಿನ್ ಸಹಿತ ಕ್ಯಾಲ್ಸಿಯಂ ಮಾತ್ರೆಯನ್ನು ಸೇವಿಸಲು ಹೇಳುತ್ತಾರೆ.

ಕೆಲವರಿಗೆ ಮಾತ್ರೆ ಔಷದಿಗಳಿಂದ ಸಮಸ್ಯೆ ನಿವಾರಣೆ ಆಗುವುದಿಲ್ಲ. ಆಗ ಅವರಿಗೆ ಬೋನ್ಸ್ ಡಿನ್ಸಿಟೋಮೆಟ್ರಿ ಟೆಸ್ಟ್ ಮಾಡಿಸಲಾಗುತ್ತದೆ. ಅವರಲ್ಲಿ ಸಮಸ್ಯೆ ಇರುವುದು ಕಂಡು ಬಂದರೆ ಸ್ವಲ್ಪ ಹೈ ಡೋಸ್ ಕ್ಯಾಲ್ಸಿಯಂ ಸಪ್ಲಿಮೆಂಟ್ ಕೊಡುತ್ತಾರೆ.

ಮೆನೋಪಾಸ್ ನಂತರದ ಮಹಿಳೆಯರಿಗೆ ಪ್ರತಿ ವಾರಕ್ಕೊಮ್ಮೆ ಸೇವಿಸುವ ಸ್ಯಾಶೆ , ಪೌಡರ್ ನೀರಿನಲ್ಲಿ ಹಾಕಿಕೊಂಡು ಸೇವಿಸಲು ತಿಳಿಸಲಾಗುತ್ತದೆ. ಈ ಪೌಡರ್ ನ್ನು 8 ರಿಂದ 10 ವಾರ ಗಳ ಕಾಲ ಸೇವಿಸಬೇಕಾಗುತ್ತದೆ.

ಗರ್ಭಿಣಿಯರು ಗರ್ಭಾವಸ್ತೆಯಲ್ಲಿ ಹಾಗೂ ಹೆರಿಗೆಯ ಬಳಿಕ ನಿಯಮಿತವಾಗಿ ಕ್ಯಾಲ್ಸಿಯಂ ಮಾತ್ರೆಯನ್ನು ಬಳಸಬೇಕು. ಇದರಿಂದ ಹುಟ್ಟುವ ಮಗುವಿನ ಮೂಳೆಗಳು ಸಮರ್ಪಕವಾಗಿ ಬೆಳವಣಿಗೆ ಹೊಂದುತ್ತದೆ. ಹೆರಿಗೆಯ ಬಳಿಕ ಮಗುವಿಗೆ ತಾಯಿಯ ಹಾಲಿನ ಮೂಲಕ ಕ್ಯಾಲ್ಸಿಯಂ ದೊರೆತು ಮಗು ಸದೃಡವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಜೀವನ ಶೈಲಿಯಲ್ಲಿ ಬದಲಾವಣೆ: 
ಎಲ್ಲಾ ವಯಸ್ಸಿನ ಮಹಿಳೆಯರು ಪ್ರತಿ ದಿನ 10ರಿಂದ 15 ನಿಮಿಷವಾದರೂ ಮುಂಜಾನೆ ಅಥವಾ ಸಂಜೆ ವೇಳೆಯ ಬಿಸಿಲಿಗೆ ಮೈ ಒಡ್ಡಬೇಕು. ಇದರಿಂದ ಡಿ.ವಿಟಮಿನ್ ನಮ್ಮ ದೇಹದಲ್ಲಿ ರೂಪಗೊಳ್ಳಲು ಸಾಧ್ಯವಾಗುತ್ತದೆ. ಒಂದೇ ಕಡೆ ಕೆಲಸಮಾಡುವವರು ಆಗಾಗ ಎದ್ದು ಓಡಾಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos