ಡಿಬಾಸ್ ಫ್ಯಾನ್ ಎಂದಿದಕ್ಕೆ ಯುವಕನ ಬಂಧನ

ಡಿಬಾಸ್ ಫ್ಯಾನ್ ಎಂದಿದಕ್ಕೆ ಯುವಕನ ಬಂಧನ

ಬೆಂಗಳೂರು, ಸೆ. 20 : ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಸಂಪೂರ್ಣ ಲಿಂಕನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ ನೆಲಮಂಗಲ ಮೂಲದ ಯುವಕ ಫೇಸ್ಬುಕ್ ಖಾತೆಯಲ್ಲಿ ಡಿಬಾಸ್ ಫ್ಯಾನ್ ಎಂದು ಬರೆದುಕೊಂಡಿದ್ದಾನೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪೈಲ್ವಾನ್ ಸಿನಿಮಾದ ಕಾಪಿರೈಟ್ ಉಲ್ಲಂಘಿಸಿ ಸಂಪೂರ್ಣ ಚಿತ್ರವನ್ನು ವೀಕ್ಷಿಸುವ ಲಿಂಕನ್ನು ಸಾರ್ವಜನಿಕವಾಗಿ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಇತರರಿಗೂ ಲಿಂಕ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಗ್ರಾಮದಲ್ಲಿ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ನಡೆಸಿದ ಕಾರ್ಯಕಚರಣೆಯಲ್ಲಿ ಯುವಕನೋರ್ವನನ್ನು ಬಂಧಿಸಿದ್ದು, ಈ ಕೃತ್ಯಕ್ಕೆ ಬಳಸಲಾಗಿರುವ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos