ಗಾಳಿ, ಮಳೆ ಬಂದರೂ ವಿದ್ಯುತ್ ನಿರಂತರ

ಗಾಳಿ, ಮಳೆ ಬಂದರೂ ವಿದ್ಯುತ್ ನಿರಂತರ

ಬೆಂಗಳೂರು, ಜೂ.ನ್ 13: ಬೆಂಗಳೂರು ಮಹಾನಗರದಲ್ಲಿ ಒಂದು ಸಣ್ಣ ಗಾಳಿ, ಮಳೆ ಬಂದರೂ ಸಾಕು ನಗರದಲ್ಲಿ ಕತ್ತಲು ಆವರಿಸಿಕೊಂಡುಬಿಡುತ್ತದೆ.ಇತರಹದ ಸಮಸ್ಯ ಮುಂದೆ ಬೆಂಗಳೂರು ನಗರಕ್ಕೆ ಇರುವುದಿಲ್ಲ.ಹೌದು, ಬೆಸ್ಕಾಂನವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಸದ್ಯ ನಗರದ 29 ಕಡೆಗಳಲ್ಲಿ ನೆಲದೊಳಗಿಂದಲೇ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬದ ಬದಲು ನೆಲದೊಳಗೆ ವಿದ್ಯುತ್ ತಂತಿ ಇರಿಸಲಾಗುತ್ತದೆ. ಹಾಗಾಗಿ ಇನ್ನುಮುಂದೆ ಮಳೆ, ಗಾಳಿ ಬಂದರೂ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ.
ಬೆಸ್ಕಾಂ 6,900 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಯನ್ನು ಭೂಮಿಯೊಳಗೆ ಕೊಂಡೊಯ್ಯುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಜನವರಿಯಿಂದ ಜೂನ್ 10ರವರೆಗೆ ಬೆಂಗಳೂರಲ್ಲಿ ಮರಗಳು, ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ 2,633 ಪ್ರಕರಗಳು ದಾಖಲಾಗಿದ್ದವು. 2135 ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು.
ಎಚ್ಎಸ್ಆರ್ ಲೇಔಟ್, ಪೀಣ್ಯ, ಇಂದಿರಾನಗರ, ದೊಮ್ಮಲೂರು, ಕೋರಮಂಗಲ, ಮತ್ತಿಕೆರೆ, ಜಯನಗರ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್ ನಲ್ಲಿ ಅತಿ ಹೆಚ್ಚು ವಿದ್ಯುತ್ ಸಮಸ್ಯೆ ಉಂಟಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos