ಸೌತೆಕಾಯಿ ಸೇವನೆಯಿಂದ ಆಗುವ ಹಲವಾರು ಪ್ರಯೋಜನಗಳು

ಸೌತೆಕಾಯಿ ಸೇವನೆಯಿಂದ ಆಗುವ ಹಲವಾರು ಪ್ರಯೋಜನಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ ಇದರಿಂದ ನಮ್ಮ ಪ್ರತಿನಿತ್ಯ ಸಿಗುವಂತಹ ಹಣ್ಣು ತರಕಾರಿಗಳಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು

ಸೌತೆಕಾಯಿಗಳು ದೇಹಕ್ಕೆ ಜಲಸಂಚಯನದ ಅತ್ಯುತ್ತಮ ಮೂಲವಾಗಿದೆ, ಏಕೆಂದರೆ ಅವುಗಳು 90% ಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತವೆ. ಜೀರ್ಣಕ್ರಿಯೆ, ರಕ್ತಪರಿಚಲನೆ ಮತ್ತು ತಾಪಮಾನ ನಿಯಂತ್ರಣ ಸೇರಿದಂತೆ ಸರಿಯಾದ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಕುಡಿಯುವ ನೀರು ಅತ್ಯಗತ್ಯ. ಇದಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚಿಸಲು ಹಾಗೂ ಮೊಡವೆಗಳಿಂದ ರಕ್ಷಣೆ ಪಡೆಯಲು ಸೌತೆಕಾಯಿ ಅತ್ಯುತ್ತಮವಾದ ತರಕಾರಿಯಾಗಿದೆ.

ಸವತೆಕಾಯಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ. ಅವು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದಲ್ಲದೇ ಸವತೆಕಾಯಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು ಸಹಕರಿಸುತ್ತದೆ.

ಹೆಚ್ಚಿನ ಪ್ರಮಾಣದ ನೀರು, ವಿಟಮಿನ್, ಮಿನರಲ್ಸ್ ಮತ್ತು ಕಡಿಮೆ ಕ್ಯಾಲೋರಿ ಇರುವ ಸೌತೆಕಾಯಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಇದೆ ಎಂದು ತಿಳಿದರೇ ನೀವೂ ಪ್ರತಿದಿನ ತಿನ್ನುತ್ತೀರ.

ಹೈಡ್ರೇಟ್ ಆಗಿರಿಸುತ್ತದೆ: ನೀರನ್ನು ನಮ್ಮ ದೇಹಕ್ಕೆ ಜೀವ ನೀಡುವ ಪ್ರಮುಖ ದ್ರವವೆಂದು ಪರಿಗಣಿಸಲಾಗಿದೆ. ನೀರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸೌತೆಕಾಯಿ ನೀರಿಗಿಂತ ಎರಡು ಪಟ್ಟು ಹೆಚ್ಚು ನಮ್ಮನ್ನು ಹೈಡ್ರೇಟ್ ಮಾಡುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ: ಸೌತೆಕಾಯಿಯು ಫೈಬರ್‌ನ ಉತ್ತಮ ಮೂಲವಾಗಿದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ.

ತ್ವಚೆಯ ಆರೋಗ್ಯ ಕಾಪಾಡುತ್ತದೆ: ಕಲೆಗಳು, ಸುಕ್ಕುಗಳಿಲ್ಲದ ಆರೋಗ್ಯಕರ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸೌತೆಕಾಯಿಗಳು ಸಹಾಯ ಮಾಡುತ್ತವೆ.

ದೀರ್ಘಕಾಲದ  ಉರಿಯೂತ ತಡೆಯುತ್ತದೆ: ಸೌತೆಕಾಯಿಯಲ್ಲಿನ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ನೀರಿನ ಅಂಶವು ನಿಮ್ಮ ದೇಹದಲ್ಲಿನ ಹಾನಿಗೊಳಗಾದ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ. ಈ ಮೂಲಕ ದೀರ್ಘಕಾಲದ ಉರಿಯೂತವನ್ನು ತಡೆಯುತ್ತದೆ

ಕಣ್ಣಿನ ಆರೋಗ್ಯ: ಸೌತೆಕಾಯಿ ಸೇವೆನೆಯಿಂದ ಕಣ್ಣುಗಳು ಉಬ್ಬಿಕೊಳ್ಳುವುದಕ್ಕೆ ತ್ವರಿತ ಪರಿಹಾರ ಸಿಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos