ಯತೀಂದ್ರ ಸಿದ್ದರಾಮಯ್ಯ ಗೆ ಸಿ.ಟಿ ರವಿ ಖಡಕ್‌ ಕೌಂಟರ್

ಯತೀಂದ್ರ ಸಿದ್ದರಾಮಯ್ಯ ಗೆ ಸಿ.ಟಿ ರವಿ ಖಡಕ್‌ ಕೌಂಟರ್

ಬೆಂಗಳೂರು: ಚಾಮರಾಜನಗರದ ಹನೂರಿನಲ್ಲಿ ಗುರುವಾರ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ಗುಜರಾತ್‌ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರೊಬ್ಬ ‘ಗೂಂಡಾ, ರೌಡಿ’ ಎಂದು ಟೀಕಿಸಿದ್ದರು. ಇವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.

ಅಮಿತ್ ಶಾ ಗೂಂಡಾ, ರೌಡಿ ಎಂದು ಟೀಕಿಸಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ. ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ಎಂದು ಯತೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿ.ಟಿ ರವಿ, ಅಪ್ಪನ ಹೆಸರಿನ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ.  ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರಾ.  1982ರಲ್ಲೇ ಅಮಿತ್ ಶಾ ಬೂತ್ ಅಧ್ಯಕ್ಷರಾಗಿದ್ದರು.  ಆಗ ಇವರಪ್ಪ ಎಂಎಲ್ ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕರಾದವರು ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದವು . ಆಗಲೂ ನಮ್ಮ ಮೇಲೂ ಗೂಂಡಾ ಆಕ್ಟ್ ಹಾಕಿದ್ರು ಹಾಗಾದ್ರೆ ನಾವು ಗೂಂಡಾಗಳಾ..? ಎಂದು ಪ್ರಶ್ಮಿಸಿದರು.

ಯತೀಂದ್ರ ಅವರು ಅರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂತವರಿಗೆ ಬಡವರ ಕಷ್ಟ ಕಾಣಿಸುತ್ತಾ..?  ಚುನಾವಣೆ ಮುಗಿದ ಮೇಳೆ ಇವರೆಲ್ಲಾ ಎಲ್ಲಿರುತ್ತಾರೋ..? ಎಂದು ಸಿಟಿ ರವಿ ಕಿಡಿಕಾರಿದರು.

ಫ್ರೆಶ್ ನ್ಯೂಸ್

Latest Posts

Featured Videos