ಆರ್ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್

ಆರ್ಸಿಬೀಲಿ  ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್

 

ಕೋಲ್ಕತ್ತಾ, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಐಪಿಎಲ್ ತಂಡಗಳಲ್ಲಿ ಒಂದಾದ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ಆಕರ್ಷಣೀಯ ಆಟಗಾರರಾಗಿರುವ ಕನ್ನಡಿಗ ಕೆಎಲ್ ರಾಹುಲ್ ನಂ.1 ಬ್ಯಾಟ್ಸ್ಮನ್‌ಆಗಿರುವುದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ.

ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ನೆರಳಿನಲ್ಲಿದ್ದೆ, ಪಂಜಾಬ್ ತಂಡದಲ್ಲಿ ಹಾಗಿಲ್ಲ, ಇದೇ ನಂ. ಬ್ಯಾಟ್ಸ್ಮನ್‌ ಅನ್ನಿಸಿಕೊಳ್ಳಲು ಕಾರಣ ಎಂದಿದ್ದಾರೆ.

ಐಪಿಎಲ್ 11 ಸೀಸನ್ ಗಮನಿಸಿದರೆ ರಾಹುಲ್ ಪಂಜಾಬ್ ತಂಡದ ನಂ.1 ಆಟಗಾರ ಅನ್ನಿಸಿದ್ದು ನಿಜವೆ.

ಕಳೆದ ವರ್ಷ ಐಪಿಎಲ್ ನಲ್ಲಿ ಅತ್ಯಧಿಕ ರನ್ ಸರದಾರರಲ್ಲಿ ರಾಹುಲ್ 3ನೇ ಸ್ಥಾನದಲ್ಲಿದ್ದರು. 17 ಇನ್ನಿಂಗ್ಸ್‌ಗಳಲ್ಲಿ 735 ರನ್ ಕಲೆ ಹಾಕಿದ್ದ ಕೇನ್ ವಿಲಿಯಮ್ಸನ್ ಪ್ರಥಮ, 14 ಇನ್ನಿಂಗ್ಸ್‌ಗಳಲ್ಲಿ 684 ರನ್ ಗಳಿಸಿದ್ದ ರಿಷಬ್ ಪಂತ್ ದ್ವಿತೀಯ ಮತ್ತು 14 ಇನ್ನಿಂಗ್ಸ್‌ಗಳಲ್ಲಿ 659 ರನ್ ಪೇರಿಸಿದ್ದ ಕೆಎಲ್ ರಾಹುಲ್ ತೃತೀಯ ಸ್ಥಾನ ಪಡೆದಿದ್ದರು.

ಕಳೆದ ವರ್ಷ ಐಪಿಎಲ್‌ನಲ್ಲಿನಿಜಕ್ಕೂ ರಾಹುಲ್ ಉತ್ತಮ ಬ್ಯಾಟಿಂಗ್ ಗಾಗಿ ಗಮನ ಸೆಳೆದಿದ್ದರು. ಆದರೆ ಈ ಸಾರಿ ಯಾಕೋ ರಾಹುಲ್ ಬ್ಯಾಟಿಂಗ್ನಲ್ಲಿ ಮಿಂಚಿಲ್ಲ. ಬದಲಿಗೆ ಕಳಪೆ ಬ್ಯಾಟಿಂಗ್ ತೋರಿಸಿದ್ದಾರೆ. ಪಂಜಾಬ್ ಪರ ಆಡಿರುವ 2 ಪಂದ್ಯಗಳಲ್ಲಿ ರಾಹುಲ್ ಕ್ರಮವಾಗಿ 4, 1 ರನ್ ಅಷ್ಟೇ ಗಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos