2.4 ಲಕ್ಷ ಕೋಟಿ ಪರಿಹಾರದ ಜಗತ್ತಿನ ದುಬಾರಿ ಡೈವೋರ್ಸ್!

2.4 ಲಕ್ಷ ಕೋಟಿ ಪರಿಹಾರದ ಜಗತ್ತಿನ ದುಬಾರಿ ಡೈವೋರ್ಸ್!

ಏ. 5, ನ್ಯೂಸ್ ಎಕ್ಸ್ ಪ್ರೆಸ್: ಅಮೆಜಾನ್ ಕಂಪನಿ ಸ್ಥಾಪಕ ಜೆಫ್‌ ಬೆಜೋಸ್ ಹಾಗು ಪತ್ನಿ ಮೆಕೆಂಜಿ ಬದುಕಿನಲ್ಲಿ ವಿರಸ ಉಂಟಾಗಿದೆ. ಕಳೆದ 25 ವರ್ಷಗಳಿಂದ ಜೊತೆಗಿದ್ದ ಜೋಡಿ ಇದೀಗ ದಾಂಪತ್ಯಕ್ಕೆ ಅಂತ್ಯ ಹಾಡಿ ಗೆಳೆಯರಾಗಿರಲು ನಿರ್ಧರಿಸಿದ್ದಾರೆ. ಇದು ಜಗತ್ತಿನ ದುಬಾರಿ ಡಿವೋರ್ಸ್ ಆಗಿದ್ದು, ಪತ್ನಿಗೆ ಸಿಗಲಿರುವ ಜೀವನಾಂಶ ಎಷ್ಟು ಗೊತ್ತೇ..? ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್ ಬೆಜೋಸ್ ಹಾಗು ಪತ್ನಿ ಮೆಕೆಂಜಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಪತಿ ಜೊತೆ ಹೆಜ್ಜೆ ಹಾಕಿದ ಪತ್ನಿ ಮೆಕೆಂಜಿ ಡಿವೋರ್ಸ್ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಜೆಫ್ ಮತ್ತು ಅವರ ಪತ್ನಿ ಮೆಕೆಂಜಿ ಬೆಜೋಸ್ ಜಂಟಿಯಾಗಿ ಟ್ವಿಟರ್‌ನಲ್ಲಿ ಅಚ್ಚರಿಯ ವಿಚಾರ ಹಂಚಿಕೊಂಡಿದ್ದಾರೆ. ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಹಾಗೂ ಅಮೆಜಾನ್ ಷೇರುದಾರರಿಗೆ ಮಾಹಿತಿ ಇರಲಿ. ಪತಿ ಪತ್ನಿಯಾಗಿದ್ದುಕೊಂಡು ನಾವಿಬ್ಬರೂ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆದಿದ್ದೇವೆ ಎಂದು ಜೆಫ್‌ ಮತ್ತು ಮೆಕೆಂಜಿ ಟ್ವಿಟರ್ ನಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಅಚ್ಚರಿ ಅಂದ್ರೆ, ಜೀವನಾಂಶವಾಗಿ ಮೆಕೆಂಜಿ ಬೆಜೋಸ್ ತನ್ನ ಪತಿ ಜೆಫ್​ ಅವರಿಂದ ಬರೋಬ್ಬರಿ 36 ಬಿಲಿಯನ್ ಅಮೆರಿಕನ್ ಡಾಲರ್ ಪಡೆಯಲಿದ್ದಾರೆ. ಭಾರತದ ರೂಪಾಯಿ ಮೌಲ್ಯಕ್ಕೆ ಸಮನಾಗಿ ಹೇಳೋದಾದರೆ, ಇದು ​₹ 2.4 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಅಂದರೆ, ಈ ಮೊತ್ತ ಕರ್ನಾಟಕದ ವಾರ್ಷಿಕ ಬಜೆಟ್‌ ಗೆ ಸಮ..! ಸಂಕಷ್ಟದ ಸಂದರ್ಭದಲ್ಲಿ ಪ್ರೋತ್ಸಾಹ ಹಾಗು ಪ್ರೀತಿ ಕೊಟ್ಟ ಎಲ್ಲ ಸ್ನೇಹಿತರು ಮತ್ತು ಬಂಧುಮಿತ್ರರಿಗೆ ಜೆಫ್ ಬೆಜೋಸ್ ಕೃತಜ್ಞತೆ ಸಲ್ಲಿಸಿದ್ದಾರೆ. ವಿಚ್ಚೇದನ ಸಂದರ್ಭದಲ್ಲೂ ಮಾನವೀಯತೆ ಮೆರೆದ ಜೆಫ್, ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚು ಅರ್ಥವಾಗಿರುವವಳು ಮೆಕೆಂಜಿ ಅಂತ ಹೇಳೋ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು ವಿವಾಹ ವಿಚ್ಛೇದ ಪ್ರಕ್ರಿಯೆಯನ್ನು ಮೆಕೆಂಜಿ ಕೂಡಾ ಅಷ್ಟೇ ಕೃತಜ್ಞತೆಯಿಂದ ಸ್ವೀಕರಿಸಿದ್ದಾರೆ. ಭವಿಷ್ಯದ ಸವಾಲಿಗೆ ಮೈಯೊಡ್ಡಿರುವ ಅವರು ಪೋಷಕರು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಟ್ವಿಟರ್ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ. ಜಗತ್ತಿನಾದ್ಯಂತ ಅಮೆಜಾನ್ ಉದ್ಯಮ ವಿಸ್ತರಿಸಿರುವ ಜೆಫ್ ಬೆಜೋಸ್ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಇವರು ಒಟ್ಟು 137 ಬಿಲಿಯನ್ ಡಾಲರ್ (ಅಂದಾಜು ರೂ. 9,67,289 ಕೋಟಿ ರು) ಮೌಲ್ಯದ ಸಂಪತ್ತಿನ ಒಡೆಯರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos