ಕೊರೊನಾ ವೈರಸ್ ಜಾಗೃತಿ

ಕೊರೊನಾ ವೈರಸ್ ಜಾಗೃತಿ

ಕೆ.ಆರ್.ಪುರ, ಮಾ. 20: ಜಗತ್ತಿನಾದ್ಯಂತ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಕೆ.ಆರ್.ಪುರ ಸಂಚಾರಿ ಪೋಲಿಸರು ವಿವಿಧ ಕಡೆಗಳಲ್ಲಿ ಜಾಗೃತಿ ಮೂಡಿಸಿದರು.

ದೊಡ್ಡನೆಕ್ಕುಂದಿ, ಹೂಡಿ, ರಾಮಮೂರ್ತಿನಗರ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನ ಸವಾರರಿಗೆ ಕೊರೊನಾ ವೈರಸ್ ನಿಂದ ದೂರವಿರಲು ಸಾರ್ವಜನಿಕರಿಗೆ ಮುಖ್ಯವಾದ ಸಂದೇಶಗಳನ್ನು ತಿಳಿಸಿದರು.

ಸಾರ್ವಜನಿಕರು ತಮ್ಮ ಕೈಗಳನ್ನು ಶುಭ್ರವಾದ ನೀರಿನಲ್ಲಿ ಡೆಟಲ್, ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳುವ ವಿಧಾನ ಬಗ್ಗೆ ಮಾಹಿತಿ ನೀಡಿದರು. ಕೈಗಳನ್ನು ಇಪ್ಪತ್ತು ಸೆಕೆಂಡ್ ಗಳ ವರೆಗೆ ಶುಭ್ರವಾಗಿ ಶುಚಿಗೊಳಿಸಿಕೊಳ್ಳಬೇಕು. ಪ್ರತಿಯೊಬ್ಬರನ್ನೂ ದೂರ ನಿಲ್ಲಿಸಿ ಮಾತನಾಡಿಸಬೇಕು. ಯಾರೇ ಸಿಕ್ಕರೂ ದೂರದಿಂದ ತ್ಯಾಂಕ್ಸ್ ಕೊಡುವ ಬದಲು ಕೈಗಳಿಂದ ನಮಸ್ಕರಿಸಬೇಕು ಎನ್ನುವ ಸಲಹೆ ನೀಡುವ ಮೂಲಕ ಕೊರೊನಾ ತಡೆಗಟ್ಟಲು ಸಹಕರಿಸಬೇಕು ಎಂದು ಹೇಳಿದರು.

ಬೆಂಗಳೂರು ನಗರ ಪೋಲಿಸ್ ಆಯುಕ್ತರ ಆದೇಶ ಮೇರೆಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕೆ.ಆರ್.ಪುರ ಸಂಚಾರಿ ಪೋಲಿಸರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos