ಕಾಂಗ್ರೆಸ್ ನ ಕೊನೆಯ ಪ್ರಯತ್ನವೂ ವಿಫಲ!

ಕಾಂಗ್ರೆಸ್ ನ ಕೊನೆಯ ಪ್ರಯತ್ನವೂ ವಿಫಲ!

ಮುಂಬೈ,ಜು. 20 : ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಇಂದು ಹಾಗೂ ನಾಳೆ ಅತೃಪ್ತರನ್ನು ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಲಿದ್ದು, ಈ ಮೂಲಕ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಆದರೆ, ಕಾಂಗ್ರೆಸ್ಗೆ ಇದ್ದ ಕೊನೆಯ ಅಸ್ತ್ರವೂ ಇದೀಗ ಟುಸ್ ಆಗಿದೆ.

ಅತೃಪ್ತ ಶಾಸಕರು ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಈ ಮಧ್ಯೆ ಶ್ರೀಮಂತ ಪಾಟೀಲ್ ಕೂಡ ಮುಂಬೈಗೆ ತೆರಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಿಜೆಪಿಯವರು ಶ್ರೀಮಂತ ಪಾಟೀಲ್ರನ್ನು ಅಪಹರಣ ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಅವರನ್ನು ಸಂಪರ್ಕಿಸಲು ಕಾಂಗ್ರೆಸ್ ಪ್ರಯತ್ನ ಪಡುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಈಗ ಕಾಂಗ್ರೆಸ್ ನ ಕೊನೆಯ ಪ್ರಯತ್ನವೂ ವಿಫಲವಾಗಿದೆ.

ಮಹಾರಾಷ್ಟ್ರದಲ್ಲಿ ಯಶೋಮತಿ ಠಾಕೂರ್ ಕಾಂಗ್ರೆಸ್ ನ ಪ್ರಭಾವಿ ನಾಯಕಿ. ಅವರು ಮಹಾರಾಷ್ಟ್ರ ಕಾಂಗ್ರೆಸ್ ನ ಕಾರ್ಯಾಧ್ಯಕ್ಷೆಯೂ ಹೌದು. ಹಾಗಾಗಿ ಮುಂಬೈನ ಸೇಂಟ್ ಜಾರ್ಜ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡುವಂತೆ ರಾಜ್ಯ ನಾಯಕರು ಕೋರಿದ್ದರು. ಈ ನಿರ್ದೇಶನದ ಮೇರೆಗೆ ಅವರು ಆಸ್ಪತ್ರೆಗೆ ತೆರಳಿದ್ದರು.

ಆದರೆ, ಶ್ರೀಮಂತ ಪಾಟೀಲ ಭೇಟಿಗೆ ಪೊಲೀಸರು ಯಶೋಮತಿಗೆ ಅವಕಾಶ ನೀಡಲಿಲ್ಲ. ಇದೇ ವೇಳೆ ಶ್ರೀಮಂತ ಪಾಟೀಲ್ ಪುತ್ರ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಹಾಗೂ ಪಾಟೀಲ್ ಪುತ್ರನ ವರ್ತನೆ ವಿರುದ್ಧ ಯಶೋಮತಿ ಕಿಡಿ ಕಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos