ಕಾಂಗ್ರೆಸ್ ಮುಂಚೆನೇ 15 ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು :ಸಿಎಮ್ ಗೆಹಲೋಟ್

ಕಾಂಗ್ರೆಸ್ ಮುಂಚೆನೇ 15 ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು :ಸಿಎಮ್ ಗೆಹಲೋಟ್

ಹೊಸದಿಲ್ಲಿ, ಮಾ. 14, ನ್ಯೂಸ್ ಎಕ್ಸ್ ಪ್ರೆಸ್ : ಕಾಂಗ್ರೆಸ್ ಆಡಳಿತದ ಸಮಯದಲ್ಲಿ 15 ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಲಾಗಿತ್ತು, ಆದರೂ ಕಾಂಗ್ರೆಸ್ ಸರಕಾರ ಎಂದೂ ಕೂಡ ತಾನು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇನೆ ಎಂದು ಎಲ್ಲೂ ಕೊಚ್ಚಿಕೊಂಡಿರಲಿಲ್ಲ.

ಮೋದಿ ಅವರು ತಮ್ಮ ಆಡಳಿತೆಯ ವೇಳೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಎಲ್ಲೆಂದರಲ್ಲಿ ಟಾಂ ಟಾಂ ಹೋಡೆಯುತ್ತಿದ್ದಾರೆ, ಆ ವಿಷಯದಲ್ಲಿ ಪ್ರಧಾನಿ ಮೋದಿ ಅವರು ನಿಜಕ್ಕೂ ಒಬ್ಬ ನಟ ಎಂದು ಗೆಹಲೋಟ್ ಲೇವಡಿ ಮಾಡಿದರು.

ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ದೇಶಕ್ಕೆ ಅಮೋಘ ಕಾಣಿಕೆ ನೀಡಿದ್ದಾರೆ. ಆದರೆ ಮೋದಿ ಸರಕಾರ ಅವ್ಯಾವುದಕ್ಕೂ ಮಹತ್ವ ನೀಡುತ್ತಿಲ್ಲ.

ಮೋದಿ ಅವರು ಗಾಂಧಿ ಕುಟುಂಬಕ್ಕೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಗೆಹಲೋಟ್ ಆರೋಪಿಸಿದರು.

ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದವರು ಭಾವಿಸುತ್ತಾರೆ. ಆದರೆ ಮೋದಿ ಆಡಳಿತೆಗೂ ಮೊದಲು ಕಾಂಗ್ರೆಸ್ ಆಡಳಿತೆಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿವೆ. ಆದರೂ ಕಾಂಗ್ರೆಸ್ ಸರಕಾರ ಎಂದೂ ಕೂಡ ತಾನು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇನೆ ಎಂದು ಕೊಚ್ಚಿಕೊಂಡಿರಲಿಲ್ಲ’ ಎಂದು ಗೆಹಲೋಟ್ ಹೇಳಿದರು.

‘ದೇಶದ ಭದ್ರತೆಗಾಗಿ ನಡೆಸುವ ಸರ್ಜಿಕಲ್ ಸ್ಟೈಕ್ ನಂತಹ ವಿದ್ಯಮಾನಗಳನ್ನು ಎಲ್ಲೆಡೆ ಕೊಚ್ಚಿ ಕೊಳ್ಳುವುದು ಅಧಿಕಾರರೂಢ ಸರಕಾರಕ್ಕೆ ತಕ್ಕುದಲ್ಲ’ ಎಂದು ಗೆಹಲೋಟ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos