ಚರ್ಚೆಗೆ ಬನ್ನಿ ಇಲ್ಲವೆ ರಾಜೀನಾಮೆ ನೀಡಿ: ಎಂಟಿಬಿ

ಚರ್ಚೆಗೆ ಬನ್ನಿ ಇಲ್ಲವೆ ರಾಜೀನಾಮೆ ನೀಡಿ: ಎಂಟಿಬಿ

ಹೊಸಕೋಟೆ: ತಾಲ್ಲೂಕು ಕಸಬಾ ಹೋಬಳಿ ವ್ಯಾಪಿಯ ಚೋಕ್ಕಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಹುಲ್ಲೂರು, ಚೋಕ್ಕಹಳ್ಳಿ, ಫಿಲ್ಲಗುಂಪೆ,ಚೊಳಪನಹಳ್ಳಿ, ಮಲ್ಲಿಮಾಕನಪುರ, ದೊಡ್ಡನಲ್ಲೂರಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಆಯುಷ್ಮಾನ್ ಕಾರ್ಡುಗಳನು ಉಚಿತವಾಗಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ವಿತರಣೆ ಮಾಡಿ ಚಾಲನೆ ನೀಡಿದರು.
ನಂತರ ಮಾತನಾಡಿ ಬಡವರಿಗೆ ಸಹಕಾರಿಯಾಗಲೆಂದು ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಕೊಟ್ಟಿದ್ದಾರೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು, ಕೆಲವು ಗ್ರಾಮಗಳಲ್ಲಿ ಅದರಲ್ಲೂ ದೂಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ೨ ಕೋಟಿಗಳ ಕಾಮಗಾರಿಗಳನ್ನು ನಾನು ಮಾಡಿದ್ದೇನೆ ಎಂದರು.
ಶಾಸಕನಾದ ಮೇಲೆ ಚೋಕ್ಕಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬರುವ ೬ ಗ್ರಾಮಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇಚ್ಚೀಚೆಗೆ ಕೆಲವು ಗ್ರಾಮಗಳಲ್ಲಿ ಅಭಿವೃದ್ಧಿ ಮಾಡಲು ಬಿಡದೆ ಅಡ್ಡಿ ಪಡಿಸುತ್ತಿದ್ದಾರೆ. ನೀವು ಬೇಕಾದರೆ ಅಭಿವೃದ್ಧಿ ಮಾಡಿ ಅದನ್ನು ಬಿಟ್ಟು ತಡೆ ಮಾಡೋದು ಯಾವ ನ್ಯಾಯ ಬಚ್ಚೇಗೌಡರೆ ನಿಮ್ಮನ್ನು ೪೦ ವರ್ಷಗಳಿಂದ ಈ ತಾಲ್ಲೂಕಿನ ಜನತೆ ನೋಡಿದ್ದಾರೆ. ಸಹಿಸಿಕೊಂಡಿದ್ದಾರೆ ಇನ್ನು ನಿಮ್ಮ ಆಟ ನಡೆಯದು, ಅದರಲ್ಲೂ ಸ್ವಾರ್ಥ ರಾಜಕಾರಣ ಮಾಡಿಕೊಂಡು ಸರ್ಕಾರಿ ಜಮೀನು, ಕುಂಟೆ, ಸ್ಮಶಾನ, ಫಾರೇಸ್ಟ್, ಗುಂಡು ತೋಪು, ಕೆರೆ ಅಂಗಳ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಗಳನ್ನು ಗುಳುಂ ಮಾಡಿರೋದು ನುಂಗಿರೋದು ನೀವಲ್ಲವೆ ಎಂದು ಆರೋಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos