ಕಾಫಿ ಪುಡಿ ಸೌಂದರ್ಯವರ್ಧಕ

ಕಾಫಿ ಪುಡಿ ಸೌಂದರ್ಯವರ್ಧಕ

ಬೆಂಗಳೂರು, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು ಕಾಫಿ ಹೆಚ್ಚಿಸುತ್ತದೆ.

ಕಾಫಿ ಪುಡಿಯನ್ನು ನೀರಿನಲ್ಲಿ ನೆನೆಸಿಡಿ. ಕೆಲ ಸಮಯದ ನಂತರ ಬೆವರು ಅತಿ ಹೆಚ್ಚಾಗಿ ಬರುವ ಜಾಗಕ್ಕೆ ಇದನ್ನು ಹಚ್ಚಿ. ಬೆವರಿನ ವಾಸನೆ ಮಂಗಮಾಯವಾಗುತ್ತದೆ.

ಸಕ್ಕರೆ ಹಾಕದೆ ಕಾಫಿ ಪುಡಿಯನ್ನು ನೀರಿಗೆ ಹಾಕಿ ಕುದಿಸಿ. ನಂತರ ಅದನ್ನು ಕಣ್ಣಿನ ಕೆಳಭಾಗದಲ್ಲಿರುವ ಕಪ್ಪು ಕಲೆ ಮೇಲೆ ಹಚ್ಚಿಕೊಳ್ಳಿ. ಕೆಲವೇ ಸಮಯದಲ್ಲಿ ಪರಿಣಾಮ ಕಾಣಬಹುದು. ಇದು ಕಪ್ಪು ಕಲೆ ಜೊತೆ ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ.

ಕಾಫಿ ಪುಡಿಗೆ ಆಲಿವ್ ಆಯಿಲ್ ಜೊತೆ ಜೇನುತುಪ್ಪ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಚರ್ಮಕ್ಕೆ ಹಾಕಿ ಸ್ಕ್ರಬ್ ಮಾಡಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಆಲಿವ್ ಆಯಿಲ್ ಇಲ್ಲವಾದ್ರೆ ಬೇರೆ ಎಣ್ಣೆಯನ್ನು ಬಳಸಬೇಡಿ. ವಾರದಲ್ಲಿ ಎರಡು ಬಾರಿ ಸ್ಕ್ರಬ್ ಬಳಸಬಹುದು.

ಚರ್ಮ ಎಣ್ಣೆಯುಕ್ತವಾಗಿದ್ದರೆ ಬ್ಲ್ಯಾಕ್ಹೆಡ್ ಗಳು ಹೆಚ್ಚಾಗಿರುತ್ತವೆ. ಮೂಗು ಮತ್ತು ಹಣೆ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಫಿಯನ್ನು ಹೆಚ್ಚಾಗಿ ಬಳಸಿದರೆ ಬ್ಲ್ಯಾಕ್ಹೆಡ್ ಗಳು ಕಡಿಮೆಯಾಗುತ್ತವೆ. ಕಾಫಿ ಚರ್ಮದಲ್ಲಿರುವ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಮಾಲಿನ್ಯದಿಂದ ಚರ್ಮವನ್ನು ರಕ್ಷಿಸುತ್ತದೆ.

ಕಾಫಿ ಚರ್ಮದ ಜೊತೆ ಕೂದಲಿಗೆ ಬಹಳ ಒಳ್ಳೆಯದು. ಹೊಳಪುಳ್ಳ ಹಾಗೂ ಮೃದು ಕೂದಲಿಗೆ ಕಾಫಿ ಪ್ರಯೋಜನಕಾರಿ. ಒಂದು ದೊಡ್ಡ ಚಮಚ ಕಾಫಿ ಪುಡಿಯನ್ನು ನೀರಿಗೆ ಬೆರೆಸಿ ಆ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

 

ಫ್ರೆಶ್ ನ್ಯೂಸ್

Latest Posts

Featured Videos