ಡಾ.ಕೆ.ಸುಧಾಕರ್ ಗೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ- ಸಿಎಂ ಸಿದ್ದರಾಮಯ್ಯ

ಡಾ.ಕೆ.ಸುಧಾಕರ್ ಗೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ- ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಇಂದು ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿಮಾತನಾಡಿದರು,   ‘ಸುಧಾಕರ್ ಆರೋಗ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಗರಣ ಆಗಿದೆ.

ದುಬಾರಿ ಬೆಲೆಗೆ  ಕೋವಿಡ್ ವೈದ್ಯಕೀಯ ಸಲಕರಣೆ ಖರೀದಿ ಮಾಡಿದ್ದಾರೆ.  ಕೋವಿಡ್ ಹಗರಣದ ಸಾಕ್ಷಾಧಾರ ಸಿಕ್ಕಿದೆ. ಡಾ.ಕೆ. ಸುಧಾಕರ್ ಜೈಲಿಗೆ ಹೋಗ್ತಾರೆ. ಸುಧಾಕರ್ ಹೆಸರು ಹೇಳಲು ನಾಚಿಕೆ ಆಗುತ್ತೆ. ಸುಧಾಕರ್ ಗೆ ಮತ ನೀಡಬೇಡಿ ಎಂದರು ಈ ಸಂದರ್ಭದಲ್ಲಿ ಹೇಳಿದರು.

ಭ್ರಷ್ಟರು ಸಂಸತ್ ​ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಅವರ ಕುರಿತ ಹಗರಣದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್​ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ ಎಂದು  ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

 

ಫ್ರೆಶ್ ನ್ಯೂಸ್

Latest Posts

Featured Videos