ಪೌರಕಾರ್ಮಿಕರು ಅಲ್ಪ ವೇತನಕ್ಕೆ ದುಡಿಮೆ

ಪೌರಕಾರ್ಮಿಕರು ಅಲ್ಪ ವೇತನಕ್ಕೆ ದುಡಿಮೆ

ಕೋಲಾರ: ಯಾವುದೇ ಹೋರಾಟಗಳು, ಕಾನೂನುಗಳು ಹಲ್ಲಿಲ್ಲದ ಹಾವುಗಳಾಗಿದ್ದು, ಮುಖೇಶ್ ಅಂಬಾನಿ ಟಾಟಾ ಬಿರ್ಲಾದಂತಹ ಹಣವಂತರಿಗೆ ದೇಶದ ಕಾನುಗಳು ತಲೆಬಾಗಿವೆ ಎಂದು ಹಿರಿ ದಲಿತ ಮುಖಂಡ ಸಾಹಿತಿ ವೆಂಕಟಾಪು ಸತ್ಯಂ ಕಳವಳ ವ್ಯಕ್ತಪಡಿಸಿದರು.
ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಗಡಿನಾಡು ಭವನದಲ್ಲಿ ತಾಲ್ಲುಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಯಿಬೇರು ಜಾನಪದ ಕಲಾ ತಂಡ, ದೊಡ್ಡಮಲ್ಲೆ, ಗಾನಸುಧ ಸಾಂಸ್ಕೃತಿಕ ಕಲಾ ಸಂಸ್ಥೆ, ಜಯಮಂಗಲ ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರತಿಬಂಧ ಕಾಯ್ದೆ ಅನುಷ್ಠಾನ ಮತ್ತು ದೌರ್ಜನ್ಯ ಪ್ರಕರಣಗಳ ಸವಲತ್ತುಗಳ ಬಗ್ಗೆ ವಿಚಾರ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಐದು ಸಾವಿರ ವರ್ಷಗಳಿಂದ ದಲಿತರ ಹೀನಾಯ ಬದುಕು ಸವಿಸಿ ಅವಮಾನಗಳನ್ನು ಎದುರಿಸಿ ಕೆರೆ ಕಟ್ಟೆಗಳನ್ನು, ಬಂಗಲೆಗಳನ್ನು ಕಟ್ಟಿ ಬಂಗಲೆ ಕೆಳಗೆ ಸಮಾಧಿಯಾದ ಜನ ಈ ದಲಿತ ಜನ. ಇಂದಿಗೂ ಅವರ ಬದುಕು ಸುಧಾರಿಸಿಲ್ಲ. ಸ್ವಾತಂತ್ರ‍್ಯ ಬಂದು ೭೪ ವರ್ಷಗಳಾದರೂ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹಲ್ಲೆಗಳು ನಿರಂತರವಾಗಿ ನಡೆಯುತ್ತಿರುವುದು ಶೋಚನೀಯವಾಗಿದೆ
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಿಗಳಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿ ಕರಪತ್ರಗಳನ್ನು ವಿತರಿಸಿದರು.

ಕಮ್ಮಟದಲ್ಲಿ ಜಾಗೃತಿ ಸಮಿತಿ ಸದಸ್ಯರು ದೌರ್ಜನ್ಯ ನಿಯಂತ್ರಣ ಪ್ರತಿಬಂಧ ಪುರಸನಹಳ್ಳಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಎ.ಕೆ.ವೆಂಕಟೇಶ್, ಲಕ್ಕೂರು ವೆಂಕಟೇಶ್, ತಾಯಿಬೇರು ಕಲಾ ತಂಡ ಅಧ್ಯಕ್ಷ ದೊಡ್ಡಮಲ್ಲೆರವಿ, ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಗೌತಮ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಲೀಂ ಉನ್ನೀಸಾ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos