ಸಿನಿಮಾ ಮಾಡಬೇಕೆನ್ನುವ ಆಸೆಯೇ ಇಲ್ಲ: ಶಾರುಖ್

ಸಿನಿಮಾ ಮಾಡಬೇಕೆನ್ನುವ ಆಸೆಯೇ ಇಲ್ಲ: ಶಾರುಖ್

ಮುಂಬೈ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಶಾರುಖ್ ಖಾನ್ ನಟಿಸಿರುವ ಚಿತ್ರಗಳು ಇತ್ತೀಚಿಗೆ ಫ್ಲಾಪ್ ಆಗುತ್ತಿವೆ. ‘ಝೀರೋ’ತೆರೆಕಂಡು 5 ತಿಂಗಳೇ ಆದರೂ ಅವರು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಈ ಮಧ್ಯೆ ಅವರು ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಶಾರುಖ್ ಮೌನ ಮುರಿದಿದ್ದಾರೆ.

2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್ಪ್ರೆಸ್’ ಚಿತ್ರವೇ ಕೊನೆ. ನಂತರ ಶಾರುಖ್ ಬತ್ತಳಿಕೆಯಿಂದ ಹೇಳಿಕೊಳ್ಳುವಂಥ ಚಿತ್ರ ಬಂದಿಲ್ಲ. ‘ಹ್ಯಾಪ್ಪಿ ನ್ಯೂ ಇಯರ್’ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿತ್ತಾದರೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿಲ್ಲ. ‘ಡಿಯರ್ ಜಿಂದಗಿ’ ಚಿತ್ರದ ಗೆಲುವಿನಲ್ಲಿ ಆಲಿಯಾ ಭಟ್ ಪಾತ್ರ ಕೂಡ ಇತ್ತು. ಹಾಗಾಗಿ, ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ‘ಝೀರೋ’ ಚಿತ್ರ ಕೂಡ ಕಹಿ ಅನುಭವ ನೀಡಿತ್ತು. ಈ ಚಿತ್ರ ಫ್ಲಾಪ್ ಆದಮೇಲೆ ಅವರಿಗೆ ನಟನೆ ಮಾಡಬೇಕು ಎಂದೆನಿಸುತ್ತಿಲ್ಲವಂತೆ.

ನನಗೆ ಈಗ ನಟನೆ ಮಾಡಬೇಕು ಎಂದೆನಿಸುತ್ತಿಲ್ಲ. ಈ ಬಾರಿ ನಾನು ಕುಟುಂಬದ ಜೊತೆ ಸಮಯ ಕಳೆಯಬೇಕು, ಪುಸ್ತಕ ಓದಬೇಕು, ಕಥೆ ಕೇಳಬೇಕು ಎನ್ನುವ ಆಲೋಚನೆ ಇದೆ. ನನ್ನ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂಬುದು ಶಾರುಖ್ ಮಾತು.

ನನ್ನ ಮುಂದಿನ ಚಿತ್ರದ ಬಗ್ಗೆ ನಾನು ಚಿಂತಿಸಿಲ್ಲ. ಜೂನ್ ನಲ್ಲಿ ಹೊಸ ಚಿತ್ರ ಘೋಷಣೆ ಮಾಡಲಿದ್ದೇನೆ ಎಂಬುದು ಹಲವರ ನಂಬಿಕೆ. ನಿಜ ಹೇಳಬೇಕೆಂದರೆ ಆ ಬಗ್ಗೆ ನಾನು ಖಾತ್ರಿ ನೀಡುವುದಿಲ್ಲ. ನನಗೆ ಅನೇಕರು ಕಥೆ ಹೇಳಿದ್ದಾರೆ. 15-20 ಕಥೆ ಕೇಳಿದ್ದೇನೆ. ಅದರಲ್ಲಿ 2-3 ಇಷ್ಟವಾಗಿದೆ. ಆದರೆ, ಯಾವುದನ್ನೂ ಅಂತಿಮ ಮಾಡಿಲ್ಲ. ನನ್ನ ಹೃದಯಕ್ಕೆ ಕಥೆ ಇಷ್ಟವಾದರೆ ನಾನು ಮಾಡುತ್ತೇನೆ,” ಎನ್ನುತ್ತಾರೆ ಶಾರುಖ್.

ಫ್ರೆಶ್ ನ್ಯೂಸ್

Latest Posts

Featured Videos