ಬಾಡಿಗೆ ತಾಯಿಯಾಗಿ ಮೊಮ್ಮಗಳಿಗೆ ಜನ್ಮ ನೀಡಿದ 61ರ ಅಜ್ಜಿ!

ಬಾಡಿಗೆ ತಾಯಿಯಾಗಿ ಮೊಮ್ಮಗಳಿಗೆ ಜನ್ಮ ನೀಡಿದ 61ರ ಅಜ್ಜಿ!

ಏ. 4, ನ್ಯೂಸ್ ಎಕ್ಸ್ ಪ್ರೆಸ್: 61 ವರ್ಷದ ಸಿಸಿಲ್‌ ಎಲೆಡ್ಜ್‌ ಸಲಿಂಗ ಕಾಮಿ ಮಗನಿಗಾಗಿ ಬಾಡಿಗೆ ತಾಯಿಯಾಗುವ ಮೂಲಕ ಮೊಮ್ಮಗನಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಅಮೆರಿಕಾದ ನೆಬ್ರಾಸ್ಕದಲ್ಲಿ ನಡೆದಿದೆ. ಹೌದು, ಸಲಿಂಗಕಾಮಿಗಳಾಗಿರುವ ಪುತ್ರ ಮ್ಯಾಥ್ಯೂ ಎಲೆಜ್ಡ್‌ ಹಾಗೂ ಎಲಿಯೆಟ್ ಮಗುವನ್ನು ಪಡೆಯಬೇಕು ಎಂದು ನಿರ್ಧರಿಸಿ ಐವಿಎಫ್‌ ಮೊರೆ ಹೋಗಲು ತೀರ್ಮಾನಿಸಿದರು. ಈ ವೇಳೆ ತಾಯಿಯನ್ನು ಕೇಳಿದಾಗ, ಋತುಚಕ್ರ ಕ್ರಿಯೆ ನಿಂತು ಹಲವು ವರ್ಷ ಕಳೆದಿದ್ದರೂ, ಬಾಡಿಗೆ ತಾಯಿಯಾಗಲು ಒಪ್ಪಿಕೊಂಡಿದ್ದರು. ಇದೀಗ ಏ.1ಕ್ಕೆ ಮುದ್ದಾದ ಹೆಣ್ಣು ಮಗುವಿಗೆ ಸಿಸಿಲ್‌ ಅವರು ಜನ್ಮ ನೀಡಿದ್ದು, ಮೊಮ್ಮಗಳಿಗೆ ಜನ್ಮ ನೀಡಿದ್ದು ಖುಷಿಯ ವಿಚಾರ ಎಂದಿದ್ದಾರೆ. ಐವಿಎಫ್‌ ಪ್ರಕ್ರಿಯೆಗೆ ಮೊದಲು ಈ ವಿಚಾರವಾಗಿ ವೈದ್ಯರ ಬಳಿ ಕೇಳಿದಾಗ, ಹತ್ತು ಹಲವು ಪರೀಕ್ಷೆಗಳನ್ನು ಮಾಡಿದ್ದಾರೆ. ಈ ವೇಳೆ 9 ತಿಂಗಳ ಕಾಲ ಮಗುವನ್ನು ಹೊತ್ತುಕೊಳ್ಳಲು ಸಿಸಿಲ್‌ ಆರೋಗ್ಯವಾಗಿದ್ದಾರೆ ಎನ್ನುವುದು ಖಾತ್ರಿಯಾದ ಬಳಿಕ ಮಗ ಮ್ಯಾಥ್ಯೂ ವೀರ್ಯಾಣುವನ್ನು ಪಡೆದು ತಾಯಿಯ ಗರ್ಭದಲ್ಲಿ ಇಂಜೆಕ್ಟ್‌ ಮಾಡಿದ್ದರೆ. ಅಚ್ಚರಿಯ ರೀತಿಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶ ಕಂಡಿತ್ತು ಎಂದು ವೈದ್ಯರು ಹೇಳಿದ್ದಾರೆ. ಇದೀಗ ಏ.1ಕ್ಕೆ ಮುದ್ದಾದ ಹೆಣ್ಣುಮಗುವಿಗೆ ಸಿಸಿಲ್‌ ಜನ್ಮ ನೀಡಿದ್ದು, ಮಗುವಿಗೆ ಉಮ ಎಂದು ಹೆಸರಿಡಲಾಗಿದೆ. ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಭಾರಿ ಪ್ರತಿಕ್ರಿಯೆ ಬಂದಿವೆ. ಮುಖ್ಯವಾಗಿ 61 ನೇ ವರ್ಷದಲ್ಲಿ ಮಗನಿಗಾಗಿ ತಾಯಿ ತೆಗೆದುಕೊಂಡ ರಿಸ್ಕ್ ಗೆ ಎಲ್ಲೆಡೆ ಶಹಬಾಸ್‌ಗಿರಿ ವ್ಯಕ್ತವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos