ಶೀಘ್ರದಲ್ಲೇ ಚುನಾವಣೆ ದಿನಾಂಕ ಘೋಷಣೆ

ಶೀಘ್ರದಲ್ಲೇ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಮುಂಬರು ಲೋಕಸಭಾ ಚುನಾವಣೆಗಾಗಿ ಮತದಾನ, ಫಲಿತಾಂಶ ಪ್ರಕಟವಾಗುವ ದಿನಾಂಕಗಳ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮುಂದಿನ ವಾರದೊಳಗೆ ಚುನಾವಣಾ ಆಯೋಗ ಚುನಾವಣೆ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ. 17ನೇ ಲೋಕಸಭೆಗಾಗಿ ಸುಮಾರು 7 ರಿಂದ 8 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ.

ಈ ವಾರ ಅಥವಾ ಮುಂದಿನ ವಾರದ ಆರಂಭದಲ್ಲಿ ಚುನಾವಣೆ ದಿನಾಂಕವನ್ನು ಘೋಷಣೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇವಿಎಂ, ವಿವಿಪ್ಯಾಟ್ ಹಾಗೂ ಚುನಾವಣಾ ಪ್ರಕ್ರಿಯೆಗೆ ಬೇಕಾದ ಸಾಧನಗಳು ಸಿದ್ಧವಾಗಿದ್ದು, ಸಂಚಾರ ಕಾರ್ಯ ಅಂತಿಮ ಹಂತದಲ್ಲಿದೆ.

ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 10 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ, ಸಮಾವೇಶಕ್ಕೆ ಅನುಗುಣವಾಗಿ ಆಯೋಗ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಪ್ರಧಾನಿ ಮೋದಿ ಸಮಾವೇಶ, ಕ್ಯಾಬಿನೆಟ್ ಸಭೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಚುನಾವಣೆ ಘೋಷಣೆಯನ್ನು ವಿಳಂಬ ಮಾಡುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ. ಹಾಲಿ ಲೋಕಸಭೆ ಅವಧಿ ಜೂನ್ 3ಕ್ಕೆ ಮುಗಿಯಲಿದ್ದು, ಅಷ್ಟರೊಳಗೆ ಚುನಾವಣಾ ಫಲಿತಾಂಶ ಪ್ರಕಟವಾಗಬೇಕಿದೆ.

ಜಮ್ಮು ಮತ್ತು ಕಾಶ್ಮೀರದ 6 ವರ್ಷದ ಅವಧಿ ಮಾ. 16, 2021ಕ್ಕೆ ಮುಕ್ತಾಯಗೊಳ್ಳಲಿದೆ.ಪಿಡಿಪಿ ಹಾಗೂ ಬಿಜೆಪಿ ನಡುವಿನ ಸಖ್ಯ ಅಂತ್ಯಗೊಂಡಿದ್ದರಿಂದ ಸರ್ಕಾರ ಮುರಿದು ಬಿದ್ದಿದೆ. ಮಾ. 27, 2019ರಂದು ಸಿಕ್ಕಿಂ ವಿಧಾನಸಭೆ ಅವಧಿ ಮುಕ್ತಾಯವಾಗುತ್ತದೆ. ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶದ ಅಸೆಂಬ್ಲಿ ಅವಧಿ ಕ್ರಮವಾಗಿ ಜೂನ್ 18, ಜೂನ್ 11, ಜೂನ್ 1ರಂದು ಮುಕ್ತಾಯಗೊಳ್ಳಲಿದೆ.

ಫ್ರೆಶ್ ನ್ಯೂಸ್

Latest Posts

Featured Videos