ಚಳಿಯಲ್ಲಿ ತಿನ್ನಿ ಬಿಸಿಬಿಸಿ ಸಮೋಸ

ಚಳಿಯಲ್ಲಿ ತಿನ್ನಿ ಬಿಸಿಬಿಸಿ ಸಮೋಸ

ಬೆಂಗಳೂರು, ಡಿ. 24 : ತಿಂಡಿಪೋತರಿಗೆ ಚಾಟ್ ಮನೆಗಳಲ್ಲಿ ತಟ್ಟೆಯ ಮೇಲೆ ದುಂಡಗೆ ಇಟ್ಟ ಡುಮ್ಮನೆ ಇರುವ ಆಲೂಗಡ್ಡೆ ಸಮೋಸಗಳನ್ನು ಕಂಡ ಕೂಡಲೆ ತಿನ್ನದೆ ಇರಲು ಸಾಧ್ಯವೇ ಇಲ್ಲ. ಅಯ್ಯೋ ಸಿಕ್ಕಾಪಟ್ಟೆ ಗ್ಯಾಸು ಗೀಸು ಅಂತ ಆರೋಗ್ಯವೂ ಹಾಳು ಅಂತೀರಾ? ಆದರೇನು ಮಾಡ್ತೀರಾ, ತಿನ್ನಬೇಕೆನಿಸಿದಾಗ ಆ ಜಿಹ್ವಾ ಚಾಪಲ್ಯವನ್ನು ಹಿಡಿದಿಟ್ಟುಕೊಳ್ಳಲೂಬಾರದು. ಎಂತೆಂಥದೋ ಎಣ್ಣೆಯಲ್ಲಿ ಕರಿದ, ಆರೋಗ್ಯವನ್ನೂ ಹಾಳುಗೆಡವುವ ಆಲೂ ಸಮೋಸ ಬದಲು ಹೆಸರುಬೇಳೆಯ ಸಮೋಸವನ್ನು ಮನೆಯಲ್ಲೇ ಮಾಡಿ ಆರೋಗ್ಯವನ್ನೂ ದಿವಿನಾಗಿಟ್ಟುಕೊಳ್ಳಿ.

ಈ ಚಳಿಗಾಲದಲ್ಲಿ ಸಂಜೆಯ ವೇಳೆಗೆ ಕಾಫಿ ಅಥವಾ ಚಹಾದ ಜೊತೆಗೆ ಒಳ್ಳೆ ಟೈಮ್ ಪಾಸ್ ತಿಂಡಿಯೂ ಹೌದು. ಬೇಕಾಗುವ ಸಾಮಗ್ರಿಗಳು ಮೈದಾ – 1 ಬಟ್ಟಲು ರವೆ – 1 ಬಟ್ಟಲು ಹೆಸರುಬೇಳೆ – 1 ಬಟ್ಟಲು ಈರುಳ್ಳಿ – ದೊಡ್ಡ ಗಾತ್ರದ್ದು 4 (ತುಟ್ಟಿಯಾಗಿರುವುದರಿಂದ 3 ಸಾಕು) ಗರಂ ಮಸಾಲ – ಅರ್ಧ ಚಮಚ ಚಾಟ್ ಮಸಾಲ – ಅರ್ಧ ಚಮಚ ಖಾರದಪುಡಿ – 1 ಚಮಚ ಉಪ್ಪು – ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು – ಸ್ವಲ್ಪ ಎಣ್ಣೆ ಕರಿಯಲು ಟೊಮೆಟೊ ಸಾಸ್ – 1 ಚಮಚ ಮಾಡುವ ವಿಧಾನ * ಮೈದಾ ಮತ್ತು ರವೆಗೆ ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿ, ಸ್ವಲ್ಪ ತುಪ್ಪ ಸೇರಿಸಿ ನಾದಿ ಮುಚ್ಚಿಡಿ. * ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಒಂದೆರಡು ಕೂಗನ್ನು ಕೂಗಿಸಿ ಸ್ಟೌವಿನಿಂದ ಕೆಳಗಿಳಿಸಿ. * ಇನ್ನೊಂದೆಡೆ ಒಗ್ಗರಣೆಯನ್ನು ತಯಾರಿಸಿಕೊಂಡು ಹೆಚ್ಚಿಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ತಾಳಿಸಿ. * ಅದಕ್ಕೆ ಬೇಯಿಸಿಟ್ಟ ಹೆಸರುಬೇಳೆ ಬೆರೆಸಿ, ಚಾಟ್ ಮಸಾಲ, ಗರಂ ಮಸಾಲ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಎಲ್ಲ ಸೇರಿಸಿ ಪಲ್ಯ ತಯಾರಿಸಿಕೊಳ್ಳಿ.

ಫ್ರೆಶ್ ನ್ಯೂಸ್

Latest Posts

Featured Videos