ಕರಾರಿನಂತೆ ತನ್ನ ಪತ್ನಿಯನ್ನು ಗರ್ಭಿಣಿ ಮಾಡದ ಫ್ರಾಂಕ್ ವಿರುದ್ಧ ಪತಿ ದೂರು..!

ಕರಾರಿನಂತೆ ತನ್ನ ಪತ್ನಿಯನ್ನು ಗರ್ಭಿಣಿ ಮಾಡದ ಫ್ರಾಂಕ್ ವಿರುದ್ಧ ಪತಿ ದೂರು..!

ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಜರ್ಮನಿ ನಿವಾಸಿ ಡ್ಯಾಮೆಟ್ರಿಯಸ್, ತನ್ನ ಪತ್ನಿ ಮಾಜಿ ಸೌಂದರ್ಯ ಸ್ಪರ್ಧೆ ವಿಜೇತೆಗೆ ಮಗು ನೀಡಲು ವಿಫಲನಾದ ಪಕ್ಕದ ಮನೆ ನಿವಾಸಿ ಫ್ರಾಂಕ್ ವಿರುದ್ಧ ದೂರು ದಾಖಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್, ಫ್ರಾಂಕ್ ದೋಷಿ ಎಂದು ತೀರ್ಪಿತ್ತಿದೆ!

ಡ್ಯಾಮೆಟ್ರಿಯಸ್ ಹಾಗೂ ಆತನ ಪತ್ನಿಗೆ ಅನೇಕ ವರ್ಷಗಳಾದ್ರೂ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ವೈದ್ಯಕೀಯ ಪರೀಕ್ಷೆ ವೇಳೆ ಡ್ಯಾಮೆಟ್ರಿಯಸ್ ಮಗು ನೀಡಲು ವಿಫಲ ಎಂಬ ವಿಷ್ಯ ಗೊತ್ತಾಗಿತ್ತು. ಹೇಗಾದರೂ ಮಗು ಬೇಕೇ ಬೇಕು ಎಂಬ ಸ್ಥಿತಿಯಲ್ಲಿದ್ದ ದಂಪತಿ ಪರ ಪುರುಷನಿಂದ ಮಗು ಪಡೆಯುವ ನಿರ್ಧಾರ ಕೈಗೊಂಡರು. ಫ್ರಾಂಕ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಪಕ್ಕದ ಮನೆ ನಿವಾಸಿ ಫ್ರಾಂಕ್ ಗೆ ಈಗಾಗಲೇ ಎರಡು ಮಕ್ಕಳಿದ್ದ ಕಾರಣ ಆತ ಡ್ಯಾಮೆಟ್ರಿಯಸ್ ಗೆ ಮಗು ನೀಡುವ ಭರವಸೆ ನೀಡಿದ್ದ. ಒಪ್ಪಂದದ ಮೇಲೆ 1.75 ಲಕ್ಷ ರೂಪಾಯಿಯನ್ನು ನೀಡಲಾಗಿತ್ತು. ಆರು ತಿಂಗಳ ಕಾಲ, ವಾರದಲ್ಲಿ ಮೂರು ದಿನ ಪತ್ನಿಯನ್ನು ಫ್ರಾಂಕ್ ಬಳಿ ಕಳುಹಿಸುತ್ತಿದ್ದ. 75 ಬಾರಿ ಸಂಬಂಧ ಬೆಳೆಸಿದ್ರೂ ಡ್ಯಾಮೆಟ್ರಿಯಸ್ ಪತ್ನಿ ಗರ್ಭ ಧರಿಸಲಿಲ್ಲ. ಅನುಮಾನಗೊಂಡ ಡ್ಯಾಮೆಟ್ರಿಯಸ್, ಫ್ರಾಂಕ್ ನನ್ನು ಪರೀಕ್ಷೆಗೊಳಪಡಿಸಿದ್ದಾನೆ. ಆಗ ದೊಡ್ಡ ಸತ್ಯ ಬಹಿರಂಗವಾಗಿದೆ. ಫ್ರಾಂಕ್ ಕೂಡ ಮಕ್ಕಳನ್ನು ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಗ ತೀವ್ರ ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಗೆ ನೀಡಿದ ಫ್ರಾಂಕ್ ಪತ್ನಿ, ತನ್ನಿಬ್ಬರ ಮಕ್ಕಳ ತಂದೆ ಫ್ರಾಂಕ್ ಅಲ್ಲ ಎಂದಿದ್ದಾಳೆ. ಆದರೆ ಹಣ ಹಿಂತಿರುಗಿಸಲು ಫ್ರಾಂಕ್ ಒಪ್ಪದ ಕಾರಣ, ಆಗ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಫ್ರೆಶ್ ನ್ಯೂಸ್

Latest Posts

Featured Videos