ಎದೆ ಹಾಲಿನ ಬ್ಯಾಂಕ್ ಯೋಜನೆ ಕೈ ಬಿಟ್ಟ ಬಾಂಗ್ಲಾ

ಎದೆ ಹಾಲಿನ ಬ್ಯಾಂಕ್ ಯೋಜನೆ ಕೈ ಬಿಟ್ಟ ಬಾಂಗ್ಲಾ

ಢಾಕಾ, ಜ. 1 : ಇದೀಗ ಎದೆಹಾಲು ಮಾರಾಟ ವಸ್ತುವಾಗಿದೆ. ಮನುಷ್ಯ ಸೇರಿದಂತೆ ಸಸ್ತನಿಗಳ ಕಂದಮ್ಮಗಳಿಗೆ ಎದೆ ಹಾಲು ಜೀವ ರಕ್ಷಕ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಎದೆ ಹಾಲು ನೀಡಬೇಕೆಂಬ ಉದ್ದೇಶದಿಂದ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲು ಮುಂದಾದ ಬಾಂಗ್ಲಾದೇಶ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.
ಹೌದು. ಈ ದೇಶದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಸುಮಾರು 500 ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳಿಗೆ ಎದೆಹಾಲು ನೀಡಬೇಕೆಂದು ಬಾಂಗ್ಲಾದೇಶ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲು ಮುಂದಾಗಿತ್ತು.ಆದರೆ ಮುಸ್ಲಿಂರೇ ಹೆಚ್ಚಾಗಿರುವ ಈ ದೇಶದಲ್ಲಿ ಈ ಯೋಜನೆ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಮುಸ್ಲಿಂಧರ್ಮಗುರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos