ತ್ರಿಷಾಳೊಂದಿಗೆ ಮದುವೆಗೆ ಪ್ರಪೋಸ್ ಮಾಡಿದ ಚಾರ್ಮಿ!

ತ್ರಿಷಾಳೊಂದಿಗೆ ಮದುವೆಗೆ ಪ್ರಪೋಸ್ ಮಾಡಿದ ಚಾರ್ಮಿ!

ಹೈದರಾಬಾದ್, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಭಾರತದಲ್ಲಿ ಸಲಿಂಗ ವಿವಾಹ ಈಗ ಕಾನೂನುಬದ್ಧವಾಗಿದೆ ಅಂತಾ ಪ್ರಸ್ತಾಪಿಸಿ ಇತ್ತೀಚೆಗಷ್ಟೇ ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಕೌರ್, ನಟಿ ತ್ರಿಶಾ ಕಣ್ಣನ್‍ ಅವರನ್ನು ಮದುವೆಯಾಗಲು ಪ್ರಪೋಸ್ ಮಾಡಿದ್ದಾರೆ. ಕಳೆದ ಮೇ 4 ರಂದು ತ್ರಿಶಾ ಹುಟ್ಟಿದ ಹಬ್ಬವಿತ್ತು. ತ್ರಿಶಾಗೆ ಪ್ರೀತಿಯ ಗೆಳತಿ ಚಾರ್ಮಿ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದರು. ಅದ್ರಲ್ಲಿ ಬೇಬಿ ಐ ಲವ್‍ ಯು ಟು ಡೆ ಅಂಡ್ ಫಾರೆವರ್. ನಾನು ನಿನ್ನ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡ್ತಿದ್ದೇನೆ. ಅದಕ್ಕೆ ನೀನು ಒಪ್ಪಿಗೆ ಸೂಚಿಸಬೇಕು. ಇದೀಗ ಸಲಿಂಗ ವಿವಾಹವೂ ಕಾನೂನುಬದ್ಧವಾಗಿದ್ದು, ನಾವಿಬ್ಬರು ಮದುವೆಯಾಗೋಣ ಎಂದು ಬರೆದಿದ್ದಾರೆ. ಇನ್ನು ಇದಕ್ಕೆ ತ್ರಿಷಾ ಕೂಡಾ ಪ್ರತಿಕ್ರಿಯಿಸಿದ್ದು, ನಾನೀಗಾಗಲೇ ಮದುವೆಗೆ ಗ್ರೀನ್‍ ಸಿಗ್ನಲ್ ನೀಡಿದ್ದೇನೆ ಅಂತಾ ತಿಳಿಸಿದ್ದಾರೆ. ಇವರಿಬ್ಬರ ಟ್ವೀಟ್ ನೋಡಿದ ಅಭಿಮಾನಿಗಳು ಶಾಕ್‍ ಆಗಿದ್ದಾರೆ. ಅಲ್ಲದೆ ಈ ಇಬ್ಬರು ಫೇಮಸ್ ನಟಿಯರು ಸಲಿಂಗ ವಿವಾಹವಾಗ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಂತರ ಈ ಸುದ್ದಿಯನ್ನು ಅಲ್ಲಗೆಳೆದಿದ್ದು, ತ್ರಿಷಾ, ಚಾರ್ಮಿ ಖುಷಿಯಲ್ಲಿ ಈ ರೀತಿ ಕಾಲೆಳೆದುಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos