‘ ಚಾಮುಂಡಿ ದರ್ಶನ ಕಾಲ್ನಡಿಗೆಯಿಂದ ಹೋಗುತ್ತನೆ’- ಪುನೀತ್

‘ ಚಾಮುಂಡಿ ದರ್ಶನ ಕಾಲ್ನಡಿಗೆಯಿಂದ ಹೋಗುತ್ತನೆ’- ಪುನೀತ್

ಮೈಸೂರು: ನಾನು ಪ್ರತಿಸಲ ಮೈಸೂರಿಗೆ ಬಂದಾಗಲೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಹೀಗೆ ಹೋದಾಗ ಎರಡು ಮೂರು ದಿನ ಅಲ್ಲಿ ಉಳಿಯುತ್ತೇನೆ ಅಂತಾದರೆ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿಯೇ ದೇವಿಯ ದರ್ಶನ ಮಾಡುತ್ತೇನೆ ಎಂದು ಪುನೀತ್‌ರಾಜ್‌ಕುಮಾರ್‌ ಹೇಳಿದ್ದಾರೆ. ‘ಚಾಮುಂಡಿ ಬೆಟ್ಟ ಮೈಸೂರಿಗರಿಗೆ ಮತ್ತು ಮೈಸೂರಿಗೆ ಬರುವವರಿಗೆಲ್ಲ ತಾಯಿ ಚಾಮುಂಡೇಶ್ವರಿಯ  ಪವಿತ್ರ ಸ್ಥಳ. ಚಾಮುಂಡಿ ಬೆಟ್ಟದ ವೈಶಿಷ್ಟ್ಯ ಬಹಳ ಚೆನ್ನಾಗಿದೆ. ನಂದಿ ವಿಗ್ರಹ ಸೆಳೆಯುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನೀವು ನನ್ನನ್ನು ನೋಡಲು ಬರುವಾಗ ಫಿಟ್‌ ಆ್ಯಂಡ್‌ ಫೈನ್‌ ಆಗಿ ಬನ್ನಿ ಎಂದು ತಾಯಿಯೇ ಸಾವಿರದ ಒಂದು ಮೆಟ್ಟಿಲುಗಳನ್ನು ಸೃಷ್ಟಿ ಮಾಡಿದ್ದಾಳೆ. ಹಾಗಾಗಿ ನಾನು ಮೆಟ್ಟಿಲಿನ ಮೂಲಕ ಹೋಗುತ್ತೇನೆ. ಇದು ನನಗೆ ಚಿಕ್ಕ ವಯಸ್ಸಿನಿಂದಲೂ ರೂಢಿ. ನಮ್ಮ ತಂದೆಯ ಜತೆ ಶೂಟಿಂಗ್‌ಗೆ ಅಂತಾ ಬಂದಾಗಲೆಲ್ಲ ಬೆಟ್ಟ ಹತ್ತಿದ್ದೇನೆ.ಚಿಕ್ಕವನಾಗಿದ್ದಾಗ ಬೆಟ್ಟವನ್ನು ಖುಷಿಗಾಗಿ ಹತ್ತುತ್ತಿದ್ದೆ. ಈಗ ದೇವಿಯನ್ನು ಭಕ್ತಿಪೂರ್ವಕವಾಗಿ ನಮಿಸೋಣ ಎಂದು ಹತ್ತುತ್ತೇನೆ. ಹತ್ತುವಾಗ ಆಗುವ ಸುಸ್ತು ಹತ್ತಿ ತಾಯಿಯ ದರ್ಶನ ಪಡೆದ ಮೇಲೆ ಇರುವುದಿಲ್ಲ. ಅದೇ ಅಲ್ಲಿನ ವಿಶೇಷತೆ’ ಎನ್ನುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos