ಗಡಿನಾಡು ಚಾಮರಾಜನಗರ ದಸರಾಗೆ ಚಾಲನೆ!

ಗಡಿನಾಡು ಚಾಮರಾಜನಗರ ದಸರಾಗೆ ಚಾಲನೆ!

ಚಾಮರಾಜನಗರ: ನಮ್ಮ ಕರ್ನಾಟಕ ಹೆಮ್ಮೆಯ ಹಬ್ಬದ ನಾಡಹಬ್ಬ ವೆಂದರೆ ಇಡೀ ವಿಶ್ವದಾದ್ಯಂತ ಈ ಹಬ್ಬ ಹಬ್ಬಿದೆ ಇದರಿಂದ ಹಲವಾರು ವಿದೇಶಿ ಪ್ರವಾಸಿಗರು ಮೈಸೂರು ದಸರ ವೀಕ್ಷಿಸಲು ಹಲವಾರು ಕಡೆಯಿಂದ ಬಂದಿರುತ್ತಾರೆ.
ನಾಡಹಬ್ಬ ದಸರಾ ಚಾಲನೆಗೆ ಕ್ಷಣಗಣನೆ ಶುರುವಾಗಿದೆ. ನವರಾತ್ರಿ ವೈಭವ ಮತ್ತು ಕೇವಲ ಸಾಂಸ್ಕೃತಿಕ ರಾಜಧಾನಿ ಮೈಸೂರಿಗಷ್ಟೇ ಸೀಮಿತವಾಗದೆ. ಈ ಬಾರಿ ಚಾಮರಾಜನಗರದಲ್ಲೂ ವಿಶೇಷವಾಗಿ ದಸರಾವನ್ನು ಆಚರಿಸಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಈ ಬಾರಿ ಚಾಮರಾಜನಗರ ದಸರಾ ಯಾವ ರೀತಿ ನಡೆಯುತ್ತೆ ಏನೆಲ್ಲಾ ವೈಶಿಷ್ಠತೆಯಿಂದ ಕೂಡಿರುತ್ತೆ.
ನಾಡಹಬ್ಬ ದಸರಾ ಪದ ಕೇಳಿದರೆ ಸಾಕು ಎಲ್ಲರ ಚಿತ್ತ ಅರಮನೆ ನಗರಿ ಮೈಸೂರಿನತ್ತ ಹೋಗುತ್ತದೆ. ಆದರೆ ದಸರಾವನ್ನು ಮೈಸೂರಿನಲ್ಲಿ ಆಚರಣೆ ಮಾಡುವುದರ ಜೊತೆಗೆ ಗಡಿನಾಡು ಚಾಮರಾಜನಗರದಲ್ಲೂ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅ.17 ರಂದು ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಚಾಮರಾಜನಗರ ದಸಾರಾಗೆ ಚಾಲನೆ ನೀಡಲಾಗುತ್ತೆ. ಸಿದ್ದರಾಮಯ್ಯ 2013 ರಲ್ಲಿ ಚಾಮರಾಜನಗರದಲ್ಲಿಯೂ ದಸರಾ ಹಬ್ಬವನ್ನ ಆಚರಿಸಬೇಕೆಂದು ಚಾಲನೆ ನೀಡಿದ್ದರು. ಆಗಿನಿಂದ ದಸರಾ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ. ಚಾಮರಾಜನಗರದಲ್ಲಿ ದಸಾರ ಆಚರಣೆಗೆ 10 ವರ್ಷ ತುಂಬಿದೆ.

ಫ್ರೆಶ್ ನ್ಯೂಸ್

Latest Posts

Featured Videos