ಕ್ಯಾನ್ಸರ್ ಗೆದ್ದ ರಿಷಿ ಕಪೂರ್

ಕ್ಯಾನ್ಸರ್ ಗೆದ್ದ ರಿಷಿ ಕಪೂರ್

ನವದೆಹಲಿ, ಮೇ. 3, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನ ಹಿರಿಯ, ಪ್ರಸಿದ್ಧ ನಟ ರಿಷಿ ಕಪೂರ್ ಅವರು ಕ್ಯಾನ್ಸರ್ ರೋಗದಿಂದ ಗುಣಮುಖರಾಗಿದ್ದಾರೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.

ಅವರು ಕಳೆದ 1 ವರ್ಷದಿಂದ ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದುವರೆಗೂ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಎಲ್ಲಿಯೂ ಅವರಾಗಲೀ, ಕುಟುಂಬದ ಇತರರಾಗಲೀ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ.

ಆದರೆ ರೋಗ ಗುಣಮುಖವಾದ ನಂತರ ಇದೀಗ ರಿಷಿ ಕಪೂರ್ ಅವರೇ ತಮಗೆ ಕ್ಯಾನ್ಸರ್ ಇದ್ದಿದ್ದು ನಿಜ ಎಂದಿದ್ದಾರೆ. ನಾನೀಗ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿದ್ದೇನೆ” ಎಂದು ಅವರು ಹೇಳಿದ್ದಾರೆ.

“ನಾನು ಇನ್ನೂ 2 ತಿಂಗಳಿನಲ್ಲಿ ಬೋನ್ ಮ್ಯಾರೋ ಕಸಿ ಚಿಕಿತ್ಸೆಗೆ ಒಳಪಡಬೇಕಿದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ನನ್ನೊಂದಿಗಿದ್ದ ನನ್ನ ಕುಟುಂಬ ಮತ್ತು ನನಗಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೂ, ಸ್ನೇಹಿತರಿಗೂ ನಾನು ಕೃತಜ್ಞ. ನಾನು ಗುಣಮುಖವಾಗಿದ್ದಕ್ಕೆ ನಿಮ್ಮ ಪ್ರಾರ್ಥನೆಯೇ ಕಾರಣ” ಎಂದು ರಿಷಿ ಕಪೂರ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos