ಕನ್ನಡ ಬಳಕೆಗೆ ಒತ್ತಾಯಿಸಿ ಅಭಿಯಾನ

  • In State
  • December 31, 2020
  • 187 Views
ಕನ್ನಡ ಬಳಕೆಗೆ ಒತ್ತಾಯಿಸಿ ಅಭಿಯಾನ

ಕೋಲಾರ: ಇಂದು ಕನ್ನಡ ಕಾಯಕ ಪಡೆ , ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ , ರಾಜ್ಯ ಯುವ ಬರಹಗಾರರ ಒಕ್ಕೂಟ ,ಗಮನ ಮಹಿಳಾ ಸಮೂಹ ಹಾಗೂ ಹಲವು ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ರಾಷ್ಟ್ರೀಕೃತ ಲೀಡ್ ಬ್ಯಾಂಕ್‌ಗಳಲ್ಲಿ ಕನ್ನಡ ಜಾಗೃತಿ ಅಭಿಯಾನವನ್ನು ಕನ್ನಡ ಕಾಯಕ ವರ್ಷದ ಪ್ರಯುಕ್ತ ಬ್ಯಾಂಕ್ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಕರ ಪತ್ರವನ್ನು ನೀಡಿ ಬ್ಯಾಂಕ್‌ನ ಮುಂದೆ ಘೋಷವಾಕ್ಯಗಳನ್ನು ಪ್ರದರ್ಶಿಸಲಾಯಿತು.
ದೇಶದ ಇತರೇ ರಾಜ್ಯಗಳಿಂದ ಬರುತ್ತಿರುವ ಬ್ಯಾಂಕ್ ಅಧಿಕಾರಿಗಳು ಕನ್ನಡ ಭಾಷೆಯನ್ನು ಕೊಲೆ ಮಾಡುತ್ತಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ನಾಗಾನಂದ ಕೆಂಪರಾಜ್ ಬೇಸರ ವ್ಯಕ್ತಪಡಿಸಿದರು.
ನಗರದ ಎಂ ಬಿ ರಸ್ತೆಯ ಬ್ಯಾಂಕ್ ಆಫ್ ಬರೋಡ ದ ವ್ಯವಸ್ಥಾಪಕರಾದ ದಿನೇಶ್ ಅವರಿಗೆ ಮನವಿ ಸಲ್ಲಿಸಿ ಮೌನ ಪ್ರತಿಭಟನೆ ನಡೆಸಿದ ನಂತರ ಮಾತನಾಡಿ, ಜಿಲ್ಲೆಯಲ್ಲಿರುವ ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಕಸಾಪ ದಿಂದ ಕನ್ನಡ ಜಾಗೃತಿ ಅಭಿಯಾನದ ಮೂಲಕ ಕನ್ನಡ ಬಳಕೆಯನ್ನು ಕಡ್ಡಾಯವಾಗಿ ಮಾಡುವಂತೆ ಮಾಡಲಾಗುತ್ತಿದೆ.
ಕೇಂದ್ರ ಸರಕಾರದ ತ್ರಿ ಭಾಷೆ ಸೂತ್ರವನ್ನು ಎಲ್ಲಾ ಬ್ಯಾಂಕ್ ಗಳು ಕಡ್ಡಾಯವಾಗಿ ಅನುಸರಿಸುವಂತೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್ ಎ ಟಿ ಎಂ ಗಳಲ್ಲಿ , ಸಾಮಾಜಿಕ ಜಾಲತಾಣ, ಸೂಚನಾ ಫಲಕ, ಜಾಹಿರಾತುಗಳು, ಚಲನ್, ಚೆಕ್ ಬುಕ್ ಎಲ್ಲವುಗಳಲ್ಲಿ ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಅನ್ಯ ರಾಜ್ಯದ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಬರುವ ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಸೋದರ ಮನೋಭಾವವನ್ನು ಬೆಳಸಬೇಕು ಎಂದು ಹೇಳಿದರು.
ಕನ್ನಡ ಕಾಯಕ ಪಡೆಯ ಸದಸ್ಯರಾದ ಬಿ.ಶಿವಕುಮಾರ್ ಮಾತನಾಡಿ ನವೆಂಬರ್ 01, 2020 ರಿಂದ ಆಕ್ಟೊಬರ್ 31, 2021 ರವರೆಗೆ ಸರ್ಕಾರ ಕನ್ನಡ ಕಾಯಕ ವರ್ಷವೆಂದು ಘೋಷಿಸಿದೆ , ಹಾಗಾಗಿ ಇಡೀ ರಾಜ್ಯದಾದ್ಯಂತ ಕನ್ನಡ ಅಭಿವೃದ್ಫಿ ಪ್ರಾಧಿಕಾರದೊಂದಿಗೆ ಪ್ರತಿ ಜಿಲ್ಲೆಯಲ್ಲಿ ಕನ್ನಡ ಕಾಯಕ ಪಡೆಯನ್ನು ಕಟ್ಟಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ , ಕೋಲಾರದಲ್ಲಿ ಕನ್ನಡ ಕಾಯಕ ಪಡೆ ಇನ್ನು ಮುಂದೆಯೂ ಸಹ ಎಲ್ಲಾ ಸರ್ಕಾರಿ ಕಚೇರಿಗಳು , ಎಲ್ಲೇ ಆಗಲಿ ಕನ್ನಡ ಭಾಷೆಯನ್ನು ಬಳಸುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು ,

ಫ್ರೆಶ್ ನ್ಯೂಸ್

Latest Posts

Featured Videos