ವ್ಯಾಕ್ಸಿನ್ ನಿಗದಿತ ಗುರಿ ತಲುಪಲು ಕರೆ

ವ್ಯಾಕ್ಸಿನ್ ನಿಗದಿತ ಗುರಿ ತಲುಪಲು ಕರೆ

ಕೊಟ್ಟೂರು: ವ್ಯಾಕ್ಸಿನ್ ನಿಗದಿತ ಗುರಿ ತಲುಪಲು ಎಲ್ಲರೂ ಕೈ ಜೋಡಿಸಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಎಂ. ಕುಮಾರ್ ಸ್ವಾಮಿ ಹೇಳಿದರು.ಶುಕ್ರವಾರ ತಾಲೂಕು ಕಛೇರಿ, ಕೊಟ್ಟೂರಿನ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ವ್ಯಾಕ್ಸಿನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲೂಕು ಶೈಕ್ಷಣಿಕವಾಗಿ ಮುಂದುವರಿದ ತಾಲೂಕಾಗಿದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳುವಲ್ಲಿ ನಿರೀಕ್ಷಿತ ಗುರಿಯನ್ನು ಇನ್ನೂ ತಲುಪಲು ಸಾಧ್ಯವಾಗಿಲ್ಲ. ಎಲ್ಲರೂ ಹೆಚ್ಚಿನ ಪ್ರಚಾರ ಕೈಗೊಂಡು ಪ್ರಗತಿ ಸಾಧಿಸಲು ಕರೆ ನೀಡಿದರು. ಇನ್ನೂ ಕೆಲ ಏರಿಯಾ, ಕಾಲೋನಿಗಳಲ್ಲಿ ಮನೆಬಾಗಿಲಿಗೆ ಹೋಗಿ ವಿನಂತಿಸಿಕೊಂಡರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಅವರಲ್ಲಿ ತಪ್ಪು ತಿಳುವಳಿಕೆ ಇನ್ನೂ ಇದೆ ಎಂದು ಸಭೆಯಲ್ಲಿ ಹಾಜರಿದ್ದ ಪಿಡಿಒ ಹಾಗೂ ಆರೋಗ್ಯ ಸಿಬ್ಬಂದಿಯವರು ತಿಳಿಸಿದರು. ಆದ್ದರಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಪ್ರತಿಯೊಂದು ವಾರ್ಡ್ನಲ್ಲಿ ಪಿಡಿಒ, ಗ್ರಾಮ ಲೆಕ್ಕಿಗರು, ಗ್ರಾ.ಪಂ. ಸದಸ್ಯರು ಹಾಗೂ ಇತರೆ ಅಧಿಕಾರಿ, ನೌಕರರು ಸೇರಿ ಮನೆ ಮನೆಗೆ ಭೇಟಿ ನೀಡಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಲಿಸಿ ಪ್ರಗತಿ ಸಾಧಿಸಲು ಶ್ರಮಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್. ತಿಮ್ಮಣ್ಣ ರವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೇ ಇತ್ತೀಚೆಗೆ ಡೆಂಗ್ಯೂ, ಚಿಕನ್ ಗೂನ್ಯಾ ಜ್ವರಗಳು ವರದಿಯಾಗುತ್ತಿದ್ದು. ಕೂಡಲೇ ಎಲ್ಲಾ ಪಿಡಿಒ ರವರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಲು, ನೀರು ನಿಂತು ಸೊಳ್ಳೆಗಳು ವಾಸಮಾಡದಂತೆ ನೈರ್ಮಲ್ಯ ಕಾಪಾಡಲು, ಔಷಧಿಯನ್ನು ಸಿಂಪಡಿಸಲು ಸೂಚಿಸಿದರು.

ವೈಧ್ಯಾಧಿಕಾರಿ ಬದ್ಯಾನಾಯ್ಕ ರವರು ಪ್ರತಿದಿನ ತಾಲೂಕಿಗೆ 2500 ವ್ಯಾಕ್ಸಿನ್ ನೀಡಿದಲ್ಲಿ ಕೊಟ್ಟೂರಿನಲ್ಲಿ 1200, ಉಜ್ಜಿನಿ, ತೂಲಹಳ್ಳಿಯಲ್ಲಿ ತಲಾ 300, ಅಲಬೂರು, ಕೋಗಳಿ, ತಿಮ್ಮಲಾಪುರದಲ್ಲಿ ತಲಾ 200 ರಂತೆ ವ್ಯಾಕ್ಸಿನ್ ವಿತರಿಸಿ ಪ್ರಗತಿ ಸಾಧಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ಇಸಿಒ ಅಜ್ಜಪ್ಪ, ಗ್ರಾ ಪಂ ಪಿಡಿಒಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಗುರುಬಸವರಾಜ ಗೌರಮ್ಮ, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos