ನಂದಿನಿ ಮಜ್ಜಿಗೆಗೆ ಬಂತು ಭಾರೀ ಬೇಡಿಕೆ!

ನಂದಿನಿ ಮಜ್ಜಿಗೆಗೆ ಬಂತು ಭಾರೀ ಬೇಡಿಕೆ!

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಎಲ್ಲಾರು ತಮ್ಮ ದಾಹವನ್ನೂ ತಣಿಸಲು ಪಾನೀಯಗಳ ಮೊರೆಹೋಗುತ್ತಿದ್ದಾರೆ.  ಬಿಸಿಲಿನ ತಾಪ, ದಾಹದಿಂದ ಬಚಾವಾಗಲು ಜನ ಜ್ಯೂಸ್, ತಂಪು ಪಾನೀಯ, ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ. ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಎಂಎಫ್​​ನ ನಂದಿನಿ ಮಜ್ಜಿಗೆಗೆ ಬೇಡಿಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದು ತಿಳಿದುಬಂದಿದೆ.

ಕರ್ನಾಟಕ ಹಾಲು ಒಕ್ಕೂಟದ  ಅಂಕಿಅಂಶಗಳ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ದಿನಕ್ಕೆ ನಂದಿನಿ ಮಜ್ಜಿಗೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,243 ಲೀಟರ್ ಬೇಡಿಕೆ ಇತ್ತು. ಆದರೆ ಮಾರ್ಚ್‌ನಲ್ಲಿ ದಿನಕ್ಕೆ 4,615 ಲೀಟರ್​ಗೆ ಹೆಚ್ಚಾಗಿದೆ. ಇದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸದ್ಯ 200 ಮಿ.ಲೀ. ಮಜ್ಜಿಗೆ ಪ್ಯಾಕೆಟ್‌ಗಳಿಗೆ ಭಾರಿ ಬೇಡಿಕೆ ಇದೆ. ಫೆಬ್ರವರಿಯಲ್ಲಿ ದಿನಕ್ಕೆ ಒಟ್ಟು 6,215 ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದವು. ಇದು ಮಾರ್ಚ್‌ನಲ್ಲಿ ದಿನಕ್ಕೆ 23,075 ಪ್ಯಾಕೆಟ್‌ಗಳಿಗೆ ಏರಿಕೆಯಾಗಿದೆ.

ಕೆಎಂಎಫ್​ ಅಂಕಿಅಂಶಗಳ ಪ್ರಕಾರ, 2023 ರ ಮಾರ್ಚ್​ಗೆ ಹೋಲಿಸಿದರೆ ಮಾರ್ಚ್ 2024 ರಲ್ಲಿ ಮಜ್ಜಿಗೆ ಬೇಡಿಕೆಯು ಶೇ 200 ರ ವರೆಗೆ ಹೆಚ್ಚಾಗಿದೆ. 2023 ರ ಮಾರ್ಚ್​ನಲ್ಲಿ, ಮಜ್ಜಿಗೆಯ ಬೇಡಿಕೆಯು ದಿನಕ್ಕೆ 2,830 ಲೀಟರ್ ಆಗಿತ್ತು. ನಂದಿನಿ ಮಜ್ಜಿಗೆಯ ರುಚಿ ಮತ್ತು ಆರೋಗ್ಯಕರ ಅಂಶಗಳ ಕಾರಣಕ್ಕಾಗಿಯೇ ಜನರು ಈ ಬೇಸಿಗೆಯಲ್ಲಿ ಹೆಚ್ಚಾಗಿ ಅದನ್ನೇ ಆಯ್ದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos