CSK ಫ್ಯಾನ್ಸ್ ರೆಕಾರ್ಡ್ ಉಡೀಸ್‌ ಮಾಡಿದ RCB ಫ್ಯಾನ್ಸ್

CSK ಫ್ಯಾನ್ಸ್ ರೆಕಾರ್ಡ್ ಉಡೀಸ್‌ ಮಾಡಿದ RCB ಫ್ಯಾನ್ಸ್

ಬೆಂಗಳೂರು: ಐಪಿಎಲ್​ 2024ರ 17ನೇ ಸೀಸನ್​ ಭರ್ಜರಿಯಾಗಿ ನಡೆಯುತ್ತಿದ್ದು, ಪ್ರತಿಯೊಂದು ಪಂದ್ಯದಲ್ಲಿಯೂ ಕ್ರೇಜ್​ ದುಪ್ಪಟ್ಟಾಗುತ್ತಿದೆ. ಅದರಲ್ಲಿಯೂ ಎಂದಿನಂತೆ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿಗಳ ಕ್ರೇಜ್​ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎನ್ನಬಹುದು.

ಚೆನ್ನೈ ಮತ್ತು ಆರ್​ಸಿಬಿ ಪಂದ್ಯ ಎಂದರೆ ಅದು ಐಪಿಎಲ್​ ನ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಎಂದೇ ಪರಿಗಣಿಸಲಾಗುತ್ತದೆ. ಈ ಎರಡೂ ತಂಡಗಳಿಗೆ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಚೆನ್ನೈ-ಆರ್​ಸಿಬಿ ಅಭಿಮಾನಿಗಳ ನಡುವೆ ದೊಡ್ಡ ಗೋಡೆಯಂತಹ ಭಿನ್ನಾಭಿಪ್ರಾಯವಿದೆ. ತಮ್ಮ ತಂಡ ಮೇಲು ತಮ್ಮ ತಂಡ ಮೇಲು ಎಂಬ ಕೂಗು ಎಂದಿಗೂ ಕೇಳಿಬರುತ್ತಿರುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್​  6ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಜೊತೆಗೆ RCB ಅಭಿಮಾನಿಗಳು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅದು ಸಹ 130 ಡೆಸಿಬಲ್​ನಲ್ಲಿ ಎಂಬುದು ಅಚ್ಚರಿ. ಅಂದರೆ ಐಪಿಎಲ್ ಇತಿಹಾಸದಲ್ಲೇ ಇಷ್ಟೊಂದು ಶಬ್ದದಲ್ಲಿ ಯಾವುದೇ ತಂಡದ ಅಭಿಮಾನಿಗಳು ಸಂಭ್ರಮಿಸಿಲ್ಲ.

ಈ ಹಿಂದೆ ಐಪಿಎಲ್ 2023 ರಲ್ಲಿ ಮಹೇಂದ್ರ ಸಿಂಗ್ ಬ್ಯಾಟಿಂಗ್​ಗೆ ಇಳಿದಾಗ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ 120 ಡಿಸಿಬಲ್​ ಸೌಂಡ್​ನಲ್ಲಿ ಸ್ವಾಗತಿಸಿದ್ದರು. ಇದುವೇ ಐಪಿಎಲ್ ಇತಿಹಾಸದಲ್ಲಿ ಕೇಳಿ ಬಂದ ಅತೀ ದೊಡ್ಡ ಹರ್ಷೋದ್ಗಾರವಾಗಿತ್ತು.

ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಕ್ಯಾಚ್ ಹಿಡಿದಾಗ ಆರ್​ಸಿಬಿ ಅಭಿಮಾನಿಗಳು 124 ಡಿಸಿಬಲ್​ ಸೌಂಡ್​ನಲ್ಲಿ ಸಂಭ್ರಮಿಸಿದ್ದರು. ಇದಾದ ಬಳಿಕ ಆರ್​ಸಿಬಿ ಜಯ ಸಾಧಿಸುತ್ತಿದ್ದಂತೆ ಈ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಅದು ಕೂಡ 130 ಡಿಸಿಬಲ್ ಸೌಂಡ್ ಸಂಭ್ರಮದೊಂದಿಗೆ ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೇ ದೊಡ್ಡ ಧ್ವನಿಯಲ್ಲಿ ಹರ್ಷೋದ್ಗಾರ ಮೊಳಗಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಾಯಲ್ ಅಭಿಮಾನಿಗಳ ಪಾಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos