ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಹಣ ದಿನಾಚರಣೆ

ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಹಣ ದಿನಾಚರಣೆ

ಕೆ.ಆರ್.ಪುರ, ಡಿ. 06: ಭಗವಾನ್ ಬುದ್ಧರ ಹೇಳಿಕೆಯಂತೆ ಮನುಷ್ಯ ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ ಸುಖಮಯವಾಗಿರುತ್ತದೆ ಎಂದು ಬೌದ್ಧ ಗುರು ಬೆನ್ನಿಗಾನಹಳ್ಳಿ ರಾಮಚಂದ್ರ ಅವರು ತಿಳಿಸಿದರು.

ಕೆ.ಆರ್. ಪುರ ತಾಲ್ಲೂಕು ಕಚೇರಿಯ ಆವರಣದಲ್ಲಿ ದಳಿತ ಒಕ್ಕೂಟ ಹಾಗೂ ಡಿಎಸ್ಎಸ್  ವತಿಯಿಂದ ಏರ್ಪಡಿಸಿದ್ದ 63 ನೇ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಹಣ ದಿನದ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಎಂ.ಎನ್. ಶೇಖರ್ ಮಾತನಾಡಿ, ದಲಿತ ಸಂಘಟನೆಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೆ ಸೂಕ್ತ ಎಂದು ಅಭಿಪ್ರಾಯ ಪಟ್ಟರು. ಮುಂಬರುವ ಏಪ್ರಿಲ್ 14 ನ ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಡಿಎಸ್ಎಸ್, ಪರಿವರ್ತನಾ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಆರ್.ವೆಂಕಟೇಶ್, ಡಾ.ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರು ನಮ್ಮನ್ನು ಅಗಲಿ ಇಂದಿಗೆ 63 ವರ್ಷಗಳಾಗಿದೆ, ತಮ್ಮ ಜೀವನವನ್ನು ಶೋಷಿತ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟು ಬದುಕಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿರುತ್ತಾರೆ ಎಂದರು.

ಹಿಂದೂ ಧರ್ಮದಲ್ಲಿನ ಕಟ್ಟುಪಾಡುಗಳನ್ನು ವಿರೋಧಿಸಿ ನಾನು ಹಿಂದುವಾಗಿ ಸಾಯುವುದಿಲ್ಲ ಎಂದು 1954ರಲ್ಲಿ ನಾಗಪುರ್ ದಲ್ಲಿ ಸುಮಾರು 5 ಲಕ್ಷ ಜನರೊಂದಿಗೆ ಬೌದ್ಧ ದರ್ಮ ಸ್ವೀಕಾರ ಮಾಡಿರುತ್ತಾರೆ ಎಂದರು. ಬಾಬಾ ಸಾಹೇಬರ ಮಾರ್ಗ ದರ್ಶನದಂತೆ ನಾವು ಬೌದ್ದ ಧರ್ಮವನ್ನು ಅರ್ಥೈಸಿಕೊಂಡು ಮುನ್ನಡಿಸಿಕೊಂಡು ಹೋಗಬೇಕೆಂದು ತಿಳಿಸಿದರು. ದಲಿತ ಯುವ ಸಮುದಾಯಕ್ಕೆ ಶಿಕ್ಷಣ ನೀಡುವ ಮೂಲಕ ಸಂಪನ್ಮೂಲಗಳ ವ್ಯಕ್ತಿಗಳಂತೆ ರೂಪಿಸಬೇಕೆಂದು ತಿಳಿಸಿದರು.

ಈ ಸಂದರ್ಬದಲ್ಲಿ ದಲಿತ ಮುಖಂಡರಾದ ಗಂಗನಬೀಡು ವೇಂಕಟಸ್ವಾಮಿ,‌ ದೊಡ್ಡಯಲ್ಲಪ್ಪ, ನಟರಾಜ್, ಅದೂರು ಮುನಿರಾಜ್, ರಾಮಯ್ಯ, ಡಿ.ಎಂ.ನಾಗರಾಜ್, ನಾರಾಯಣ ಸ್ವಾಮಿ, ಸಂಪತ್, ರವಿಕುಮಾರ್, ರಮೇಶ್, ಮೂರ್ತಿ, ಪ್ರಭು, ಮಹೇಂದ್ರ ಕುಮಾರ್, ಅಂಬರೀಶ್ ಸೇರಿದಂತೆ ಹಲವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos