ಕಪ್ಪು ದ್ರಾಕ್ಷಿಯಲ್ಲಿ ಅಡಗಿದೆ ಹಲವಾರು ಆರೋಗ್ಯ ಪ್ರಯೋಜನಗಳು!

ಕಪ್ಪು ದ್ರಾಕ್ಷಿಯಲ್ಲಿ ಅಡಗಿದೆ ಹಲವಾರು ಆರೋಗ್ಯ ಪ್ರಯೋಜನಗಳು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಆದರೆ ಪ್ರತಿನಿತ್ಯ ಸಿಗುವಂತಹ ಹಣ್ಣು ತರಕಾರಿಗಳಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.

ಅತ್ಯಂತ ಜನಪ್ರಿಯ ಮತ್ತು ರುಚಿಕರವಾದ ಹಣ್ಣುಗಳಲ್ಲಿ ದ್ರಾಕ್ಷಿ ಕೂಡ ಒಂದಾಗಿದೆ. ಇದರ ಬೆಲೆ ತುಂಬಾ ಹೆಚ್ಚಾಗಿದ್ದರೂ, ಕಪ್ಪು ದ್ರಾಕ್ಷಿಗೆ ಇನ್ನೂ ಕೊಂಚ ಬೆಲೆ ಹೆಚ್ಚು ಎಂದೇ ಹೇಳಬಹುದು. ಅಷ್ಟಕ್ಕೂ ಹೆಚ್ಚು ಹಣ ನೀಡಿ ಕಪ್ಪು ದ್ರಾಕ್ಷಿಯನ್ನೇ ಜನ ಏಕೆ ಖರೀದಿಸುತ್ತಾರೆ.

ಚಳಿಗಾಲ ಆರಂಭವಾಗಿದೆ ಎಂದರೆ ಕಪ್ಪು ದ್ರಾಕ್ಷಿ ಸೀಸನ್ ಶುರು ಎಂದರ್ಥ. ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ದ್ರಾಕ್ಷಿ ಇಷ್ಟವಾಗುತ್ತದೆ. ಅತ್ಯಂತ ಜನಪ್ರಿಯ ಮತ್ತು ರುಚಿಕರವಾದ ಹಣ್ಣುಗಳಲ್ಲಿ ದ್ರಾಕ್ಷಿ ಕೂಡ ಒಂದಾಗಿದೆ. ಇದರ ಬೆಲೆ ತುಂಬಾ ಹೆಚ್ಚಾಗಿದ್ದರೂ, ಕಪ್ಪು ದ್ರಾಕ್ಷಿಗೆ ಇನ್ನೂ ಕೊಂಚ ಬೆಲೆ ಹೆಚ್ಚು ಎಂದೇ ಹೇಳಬಹುದು.

ಕಪ್ಪು ದ್ರಾಕ್ಷಿಯಲ್ಲಿ ಅಡಗಿರುವ ಸಾವಿರಾರು ಆರೋಗ್ಯ ಪ್ರಯೋಜನಗಳು. ಹೌದು, ವೈದ್ಯರ ಪ್ರಕಾರ, ಕಪ್ಪು ದ್ರಾಕ್ಷಿಯು ಇತರ ದ್ರಾಕ್ಷಿಗಳಿಗಿಂತ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಪಾಲಿಫಿನಾಲ್ಗಳ ರೂಪದಲ್ಲಿವೆ.

ಈ ಕುರಿತಂತೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿರುವ ಹೋಮಿಯೋಪತಿ ವೈದ್ಯ ರಂಜಿತ್ ದತ್ತಾ ಅವರು, ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲನ್ನು ದೃಢವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.

ಅಲ್ಲದೇ ಮಧುಮೇಹಿಗಳಿಗೂ ಕಪ್ಪು ದ್ರಾಕ್ಷಿ ತುಂಬಾ ಒಳ್ಳೆಯದು. ಆದರೆ ಕಪ್ಪು ದ್ರಾಕ್ಷಿಯನ್ನು ಮಿತವಾಗಿ ಮತ್ತು ವೈದ್ಯರ ಸಲಹೆಯ ಮೇರೆಗೆ ಸೇವಿಸಬೇಕು. ಕಪ್ಪು ದ್ರಾಕ್ಷಿ ರೆಸ್ವೆರಾಟ್ರೊಲ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಈ ಹಣ್ಣು ಕರುಳು, ಸ್ತನ, ಗರ್ಭಕೋಶ, ಶ್ವಾಸಕೋಶದಂತಹ ಕ್ಯಾನ್ಸರ್ಗಳಲ್ಲಿ ರೇಡಿಯೋ ಮತ್ತು ಕೀಮೋ ಥೆರಪಿಗೆ ಪೂರಕವಾಗಿದೆ. ಕಪ್ಪು ದ್ರಾಕ್ಷಿ ಬೀಜಗಳ ಪೇಸ್ಟ್ ಅನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಕೂದಲಿನ ಮೇಲೆ ಮಸಾಜ್ ಕೂಡ ಮಾಡಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos