ನಟಿ ರಶ್ಮಿಕಾ ಹುಟ್ಟುಹಬ್ಬದಂದು ಸಿಕ್ತು ಅಭಿಮಾನಿಗಳಿಗೆ ಸಿಹಿ ಸುದ್ದಿ

ನಟಿ ರಶ್ಮಿಕಾ ಹುಟ್ಟುಹಬ್ಬದಂದು ಸಿಕ್ತು ಅಭಿಮಾನಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬರ್ತಡೇ ಸ್ಪೆಷಲ್ ಅವರ ಮುಂಬರುವ ಯೋಜನೆಯ ‘ ದಿ ಗರ್ಲ್‌ಫ್ರೆಂಡ್ ‘ ಹಾಗೂ  ‘ಪುಷ್ಪಾ 2- ದಿ ರೂಲ್’  ಪೋಸ್ಟರ್‌ಗಳನ್ನುಅನಾವರಣಗೊಳಿಸಿದ್ದಾರೆ. ಸಿನಿಮಾ ತಯಾರಕರು ನಟಿಯನ್ನು ಒಳಗೊಂಡ ಎರಡು ಆಕರ್ಷಕ ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಎರಡು ಪೋಸ್ಟರ್‌ಗಳು  ರಶ್ಮಿಕಾ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸಿದ್ದಾರೆ ಒಂದರಲ್ಲ ಕ್ಯಾಶುವಲ್ ಅಲ್ಲಿ ಕಂಡರೆ, ಇನ್ನೊಂದರಲ್ಲಿ ಸೀರೆಯಲ್ಲಿ ಪಕ್ಕ ಲೋಕಲ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತು ಅವರ ಪಾತ್ರದ ವಿಭಿನ್ನ ಪಾತ್ರವನ್ನು ತೋರಿಸಿಕೊಡುತ್ತದೆ.

‘ ದಿ ಗರ್ಲ್‌ಫ್ರೆಂಡ್ ‘ ಪೋಸ್ಟರ್‌ನಲ್ಲಿ ರಶ್ಮಿಕಾ ತನ್ನ ಕೈಯಲ್ಲಿ ಪೆನ್ನು ಹಿಡಿದಿದ್ದು, ಕಾಲೇಜು ಲೈಬ್ರರಿಯಿಂದ ಪೋಸ್ಟರ್ ಮೂಡಿ ಬಂದಿದೆ.  ‘ಪುಷ್ಪಾ 2- ದಿ ರೂಲ್’  ಸೀರೆಯಲ್ಲಿ ಖಡಕ್ ಲುಕ್ ಅಲ್ಲಿ ಕಾಣಿಸಿದ್ದಾರೆ.

ರಶ್ಮಿಕಾ ತನ್ನ ಕಾಲೇಜಿನ ಕಾರಿಡಾರ್‌ನಲ್ಲಿ ತನ್ನ ಹೆಗಲ ಮೇಲೆ ಚೀಲವನ್ನು ಹೊತ್ತು ನಿಂತಿರುವುದನ್ನು ತೋರಿಸುತ್ತದೆ. ಈ ಚಿತ್ರಣವು ನಿರ್ಣಯ ಮತ್ತು ಉದ್ದೇಶದ ಅರ್ಥವನ್ನು ಸೂಚಿಸುತ್ತದೆ, ಪಾತ್ರದ ಪ್ರಯಾಣದ ಒಂದು ನೋಟವನ್ನು ನೀಡುತ್ತದೆ.

ಕೊರಳ ತುಂಬಾ ಬಂಗಾರ ಧರಿಸಿದ್ದಾರೆ. ಶ್ರೀವಲ್ಲಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಣ್ಣಿಗೆ ಬೆರಳಿಟ್ಟ ಇತರೆ ನಟನಟಿಯರ ಜತೆಗೂ ಶ್ರೀವಲ್ಲಿಯ ಫೋಟೋವನ್ನು ಹೋಲಿಕೆ ಮಾಡುತ್ತಿದ್ದಾರೆ. ಪುಷ್ಪ 2 ಸಿನಿಮಾ ಬಿಡುಗಡೆ ದಿನಾಂಕವನ್ನೂ ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos