ಅಯ್ಯೋ, ಪಕ್ಷಿಗಳಿಗೂ ದಂಡ!

ಬೆಂಗಳೂರು, ಜೂ. 20 : ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದಕೆ ಎಸ್‍ಆರ್ ಟಿಸಿ ಈ ಬಾರಿ ಪಾರಿವಾಳಗಳಿಗೆ 900 ರೂ. ದಂಡ ಪ್ರಯೋಗ ಮಾಡಿದೆ. ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಆದರೆ ಆ ವ್ಯಕ್ತಿ ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ.

 

ಈ ವೇಳೆ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದ್ ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ಫೈನ್ ಹಾಕಿದ್ದಾರೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಂಡಿದ್ದಕ್ಕೆ ವ್ಯಕ್ತಿಯೊಬ್ಬರು ಸೀಟಿನಲ್ಲಿಯೇ ಕೋಳಿಯನ್ನು ಕುಳ್ಳಿರಿಸಿದ್ದರು. ಸದ್ಯ ಕೆಎಸ್‍ಆರ್ ಟಿಸಿಯ ಈ ನಡೆ ಈಗ ಸಾರ್ವಜನಿಕರಲ್ಲಿ ನಗುವಿನ ಜೊತೆ ಸಿಟ್ಟು ಕೂಡ ತರಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos