‘ಭಾರತ್’ ಸಿನಿಮಾ ಟೀಂ ಇಂಡಿಯಾ ಆಟಗಾರರು ವೀಕ್ಷಣೆ

‘ಭಾರತ್’ ಸಿನಿಮಾ ಟೀಂ ಇಂಡಿಯಾ ಆಟಗಾರರು ವೀಕ್ಷಣೆ

ನವದೆಹಲಿ: ವಿಶ್ವಕಪ್‍ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಆಟಗಾರು ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಸಿನಿಮಾ ನೋಡಿದ ತಕ್ಷಣ  ಫೋಟೋವನ್ನು ಭಾರತ ತಂಡದ ಕೇದಾರ್ ಜಾಧವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕನ್ನಡಿಗ ಕೆ.ಎಲ್ ರಾಹುಲ್, ಮಾಜಿ ನಾಯಕ ಎಂ.ಎಸ್ ಧೋನಿ, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, “ಧನ್ಯವಾದಗಳು ಭಾರತ ತಂಡ ನನ್ನ ಸಿನಿಮಾವನ್ನು ಇಷ್ಟಪಟ್ಟಿದಕ್ಕೆ. ನನ್ನ ಸಿನಿಮಾ ನೋಡಿದಕ್ಕೆ ಧನ್ಯವಾದಗಳು ಸಹೋದರರೇ. ನಿಮ್ಮ ಮುಂದಿನ ಪಂದ್ಯಗಳಿಗೆ ಶುಭವಾಗಲಿ ಭಾರತ್ ಅಪ್ಕಾ ಸತ್ ಹೈ (ಸಂಪೂರ್ಣ ಭಾರತ ನನ್ನ ಜೊತೆ ಇದೆ)” ಎಂದು ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos