ಪ್ರಿಯಕರನನ್ನು ಮಚ್ಚಿನಿಂದ ಕೊಂದ ನಟಿ!

ಪ್ರಿಯಕರನನ್ನು ಮಚ್ಚಿನಿಂದ ಕೊಂದ ನಟಿ!

ಚೆನ್ನೈ,ಡಿ. 31 : 38 ವರ್ಷದ ಮಾಜಿ ಪ್ರಿಯಕರನನ್ನು 42 ವರ್ಷದ ನಟಿಯೋರ್ವಳು ಲಾಂಗು ಮತ್ತು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ತಮಿಳುನಾಡಿದ ಕೊಲತ್ತೂರಿನಲ್ಲಿ ಈ ಘಟನೆ ನಡೆದಿದ್ದು ಕಿರುತೆರೆ ನಟಿ ಎಸ್ ದೇವಿ ತಮ್ಮ ಸಹೋದರಿಯ ನಿವಾಸದಲ್ಲಿ ಆತನನ್ನು ಹೊಡೆದು ಸಾಯಿಸಿದ್ದಾಳೆ. ನಂತರ ಆಕೆ ಪೊಲೀಸರಿಗೆ ಶರಣಾಗಿದ್ದು ವಿಚಾರಣೆ ನಡೆಸಿದ ಬಲಿಕ ದೇವಿಯ ಗಂಡ, ಸಹೋದರಿ ಮತ್ತು ಸಹೋದರಿಯ ಪತಿಯನ್ನು ಬಂಧಿಸಿದ್ದು ಕೋರ್ಟ್ ಅವರನ್ನು ಜೈಲಿಗೆ ಕಳುಹಿಸಿದೆ.
ನಂತರ ಮನೆಯಲ್ಲೇ ಕುಳಿತು ಎಸ್ ದೇವಿ ಟೈಲರಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ದೇವಿ ತನ್ನ ಸಹೋದರಿ ಲಕ್ಷ್ಮಿ ಮನೆಯಲ್ಲಿರುವುದು ಪತ್ತೆ ಹಚ್ಚಿದ ರವಿ ಅಲ್ಲಿಗೆ ಬಂದು ಲಕ್ಷ್ಮಿ ಬಳಿ ನನ್ನ ಜೊತೆ ದೇವಿಯನ್ನು ಕಳುಹಿಸುವಂತೆ ಕೇಳಿದ್ದಾನೆ. ಕೂಡಲೇ ಲಕ್ಷ್ಮಿ, ದೇವಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos