ಶೋಕಿವಾಲ ನ ಆಟ ಶುರು..!

ಶೋಕಿವಾಲ ನ ಆಟ ಶುರು..!

ಬೆಂಗಳೂರು, ಜ. 24:ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಅಂತ ಹೆಸರು ಮಾಡಿರುವ ಅಜೇಯ್ ರಾವ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೌದು, ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಒಂದು ಉಡುಗೊರೆ ನೀಡಿದ್ದಾರೆ.

ನಟ ಅಜೇಯ್ ರಾವ್ ನಟನೆಯಲ್ಲಿ ಮೂಡಿಬರ್ತಿರೋ ಬರ್ತಿರೋ ಹೊಸ ಸಿನಿಮಾ ಶೋಕಿವಾಲದ ಹೊಸ ಟೀಸರ್ ರಿಲೀಸ್ ಆಗಿದೆ. ಅಜಯ್ ರಾವ್ ಬರ್ತ್ ಡೇ ಹಿನ್ನೆಲೆಯಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಈ ಗಿಫ್ಟ್ ನೀಡಿದ್ದು ಟೀಸರ್ ಸಖತ್ ಕಲರ್ಫುಲ್ಲಾಗಿದೆ.

ನಿನ್ ಮಗನ್ ಬಗ್ಗೆ ಹೇಳಮ್ಮ ಅನ್ನೋ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತೆ. ಈ ವೇಳೆ ಅಜಯ್ ರಾವ್ ತಾಯಿ ಪಾತ್ರ ಮಾಡಿರೋ ನಟಿ ತಾರಾ ಅವ್ರು ಹೇಳೋ, ‘ಅವ್ನು ಬಗ್ಗೆ ಒಂದ್ ಫೊಟೋದಾಗೆ ಹೇಳೋಕೆ ಆಗಕಿಲ್ಲ ಸರ್, ಒಂದ್ ಅಲ್ಬಮ್ಮೇ ಬೇಕು, ಅವ್ನು ಸೆಪರೇಟು ಸರ್’ ಡೈಲಾಗ್ ಪಂಚ್ ನೀಡುತ್ತೆ.

ಇದಾದ ಬಳಿಕ ಕೊಳಲು ಹಿಡಿದ ಕೃಷ್ಣನಂತೆ ಪೋಸ್ ಕೊಡೋ ಅಜಯ್ ರಾವ್ ‘ ಹಾರ ಬಿದ್ದ ಮೇಲೆ ಚಪ್ಪಾಳೆನೂ ಬೀಳುತ್ತೆ, ಶಿಳ್ಳೆನೂ ಬೀಳುತ್ತೆ.. ಟೈಮ್ ಚೇಂಜ್ ಆಯ್ತು ಗುರು.. ಇನ್ಮೇಲೆ ಈ ಶೋಕಿವಾಲನ ಆಟ ಶುರು.. ಡೌಟಾ.. ನೋಡೇ ಬಿಡುವಾ..’ ಅಂತ ಮಾಸ್ ಆಗಿ ಡೈಲಾಗ್ ಹೊಡೆದು ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos