ಡೆಲ್ಲಿ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್‌

ಡೆಲ್ಲಿ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್‌

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ 9 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ 12 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ರಿಯಾನ್‌ ಪರಾಗ್‌ ಸ್ಫೋಟಕ ಆಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಸ್ಟಬ್ಸ್‌ ಹೋರಾಟದ ಹೊರತಾಗಿಯೂ 5 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ 4ನೇ ಓವರ್‌ನಲ್ಲಿ ಮಿಚೆಲ್‌ ಮಾರ್ಷ್‌(23), ರಿಕ್ಕಿ ಭುಯಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಪವರ್‌-ಪ್ಲೇ ಮುಕ್ತಾಯಕ್ಕೆ ತಂಡದ ಸ್ಕೋರ್‌ 59. ಆದರೆ 34 ಎಸೆತಗಳಲ್ಲಿ 49 ರನ್‌ ಸಿಡಿಸಿದ ಡೇವಿಡ್‌ ವಾರ್ನರ್‌ರನ್ನು ಆವೇಶ್‌ ಪೆವಿಲಿಯನ್‌ಗೆ ಅಟ್ಟಿದರೆ, ರಿಷಭ್‌ ಪಂತ್‌ರನ್ನು(28) ಚಹಲ್‌ ಔಟ್‌ ಮಾಡಿದರು. 16 ಓವರಲ್ಲಿ 5 ವಿಕೆಟ್‌ಗೆ 126 ರನ್‌ ಗಳಿಸಿದ್ದ ತಂಡಕ್ಕೆ ಕೊನೆ 24 ಎಸೆತದಲ್ಲಿ 60 ರನ್‌ ಬೇಕಿತ್ತು. ಈ ವೇಳೆ ಟ್ರಿಸ್ಟನ್‌ ಸ್ಟಬ್ಸ್‌(23 ಎಸೆತಗಳಲ್ಲಿ ಔಟಾಗದೆ 44) ಹೋರಾಟ ಪ್ರದರ್ಶಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos