ಕುಲ್ಫಿ ತಿನ್ನುವಾಗ ಎಚ್ಚರ!

 ಕುಲ್ಫಿ ತಿನ್ನುವಾಗ ಎಚ್ಚರ!

ಮಡಿಕೇರಿ, ಫೆ. 17: ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಹ ಕುಲ್ಫಿ ಎಂದರೆ ಎಲ್ಲಿಲ್ಲದ ಪ್ರಾಣ. ಮಡಿಕೇರಿ ತಾಲ್ಲೂಕಿನ ಆವಂದೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿ ನೂರಾರು ಜನ ಸೇರಿದ್ದರು. ವಾಹನದಲ್ಲಿ ಬಂದಿದ್ದ ವ್ಯಕ್ತಿ ಕುಲ್ಫಿ ಮಾರಾಟ ಮಾಡುತ್ತಿದ್ದ. ಅದೇ ಗ್ರಾಮದ ರಮ್ಯಾ ಅವರು 3 ಕುಲ್ಫಿ ಖರೀದಿಸಿದ್ದರು. ಮನೆಗೆ ತೆರಳಿ ಮಕ್ಕಳಿಗೂ 2 ಕುಲ್ಫಿ ನೀಡಿ, ಅವರೂ ಒಂದನ್ನು ತಿನ್ನಲು ಆರಂಭಿಸಿದ್ದಾರೆ. ಆ ಮಹಿಳೆಗೆ ಏನೋ ನಾಲಿಗೆಗೆ ಗೀರಿದ ಅನುಭವವಾಗಿದೆ. ಅದನ್ನು ಪರಿಶೀಲಿಸಿದಾಗ ಚೂಪಾದ ಬ್ಲೇಡ್ ಪತ್ತೆಯಾಗಿದೆ. ಕೊನೆಗೆ ಕುಲ್ಫಿ ಖರೀದಿಸಿದ ಸ್ಥಳಕ್ಕೆ ಬಂದು ನೋಡುವಾಗ ಕುಲ್ಫಿ ಮಾರಾಟಗಾರ ಅಲ್ಲಿ ಇರಲ್ಲಿಲ್ಲ. ಕೊನೆಗೆ ಕವರ್ ಪರಿಶೀಲಿಸಿದಾಗ ನಾಪೋಕ್ಲು ಘಟಕವೊಂದರಲ್ಲಿ ಈ ಕುಲ್ಫಿ ತಯಾರಾಗಿರುವುದು ಗೊತ್ತಾಗಿದೆ.

‘ಕುಲ್ಫಿಯನ್ನು ಪೂರ್ತಿ ತಿಂದಿದ್ದರೆ ನಾಲಿಗೆಯೇ ಕತ್ತರಿಸಿ ಹೋಗುತ್ತಿತ್ತು. ಸ್ವಲ್ಪದರಲ್ಲಿ ನಾನು ಬಾಚಾವ್’ ಎಂದು ಕುಲ್ಫಿ ಖರೀದಿಸಿದ ಮಹಿಳೆ ರಮ್ಯಾ ಹೇಳಿದ್ದಾರೆ. ‘ಹಾಲಿನ ಪ್ಯಾಕ್ ಅನ್ನು ಬ್ಲೇಡ್ನಿಂದ ಕತ್ತರಿಸಿ ಕುಲ್ಫಿಗೆ ಮಿಶ್ರಣ ಮಾಡುವಾಗ ಬ್ಲೇಡ್ ಹಾಲಿನಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಲನ್ನು ಫಿಲ್ಟರ್ ಮಾಡಿ ತೆಗೆಯಬೇಕು. ಆದರೆ, ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ನಾಪೋಕ್ಲು ಕುಲ್ಫಿ ತಯಾರಕಾ ಘಟಕದ ಮಾಲೀಕ ಅಶ್ರಫ್ ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos