ಬೊಮ್ಮನಹಳ್ಳಿ ವಲಯ ಬಿಬಿಎಂಪಿ ಕಚೇರಿಯಲ್ಲಿ ಧ್ವಜಾರೋಹಣ

ಬೊಮ್ಮನಹಳ್ಳಿ ವಲಯ ಬಿಬಿಎಂಪಿ ಕಚೇರಿಯಲ್ಲಿ ಧ್ವಜಾರೋಹಣ

ಬೊಮ್ಮನಹಳ್ಳಿ, ಆ. 15 : 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಶಾಸಕ ಎಂ. ಸತೀಶ್ ರೆಡ್ಡಿಯವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ರೆಡ್ಡಿಯವರು 73 ವರ್ಷಗಳಲ್ಲಿ ದೇಶ ಹಲವಾರು ಏರುಪೇರುಗಳನ್ನು ಕಂಡಿದೆ. ಇತ್ತೀಚೆಗೆ ಕಾಶ್ಮೀರ ಸಂಪೂರ್ಣ ಸ್ವತಂತ್ರವನ್ನು ಹೊಂದಿರುವ ರಾಜ್ಯವಾಗಿದ್ದು, ನರೇಂದ್ರ ಮೋದಿಯವರ ಧೃಡ ನಿರ್ಧಾರದಿಂದ ಕಾಶ್ಮೀರಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದೆ.

ರ್ಟಿ ಕಲ್ 370 ರಿಂದ ಕಾಶ್ಮೀರ ದ ಜನತೆ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲಿದ್ದಾರೆಂದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2017-18 ರಿಂದ ಇಲ್ಲಿಯವರೆಗೆ ಈ ಹಿಂದಿನ ಸರ್ಕಾರ ಯಾವುದೇ ರೀತಿ ಅಭಿವೃದ್ಧಿಯನ್ನು ಮಾಡದೇ ಮಲತಾಯಿ ಧೋರಣೆ ತೋರುತ್ತಿತ್ತು. ಇದೀಗ ಮುಖ್ಯಮಂತ್ರಿ ಯಡಿಯುರಪ್ಪನವರ ಸಹಕಾರದಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೊಳ್ಳಲಿದೆ. ಅಗತ್ಯ ನಿಧಿಯನ್ನು ಕ್ಷೇತ್ರಕ್ಕೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕರ್ಯಗಳನ್ನು ಕೈಗೊಳ್ಳಲಿದ್ದೇವೆಂದರು.

ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತೆ ಡಾ ಸೌಜನ್ಯಾರವರು ಮಾತನಾಡುತ್ತಾ ಹಲವಾರು ಗಣ್ಯರ ಬಲಿದಾನ ಹಾಗೂ ಹೋರಾಟಗಳಿಂದ ದೇಶಕ್ಕೆ ಸ್ವತಂತ್ರ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ ಹೆಚ್.ಎಸ್.ಆರ್. ಬಡಾವಣೆ, 2ನೇ ಹಂತದಲ್ಲಿ ಕ್ಲಾಕ್ ಟವರ್ನ್ನು ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸಿದರು. ಹರಳುಕುಂಟೆ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಪಾಲಿಕ ಅಭಿಯಂತರರು ಶಶಿಕುಮಾರ್, ಕಂದಾಯಾಧಿಕಾರಿಗಳಾದ ಮುನಿಯಪ್ಪ, ಬಾಲಚಂದ್ರ, ಬಿಬಿಎಂಪಿ ಸಿಬ್ಬಂದಿ ಭಾಗವಹಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos