ಬಾರ್ ಅಂಗಡಿ ತೆರವಿಗೆ  ಪ್ರತಿಭಟನೆ

ಬಾರ್ ಅಂಗಡಿ ತೆರವಿಗೆ  ಪ್ರತಿಭಟನೆ

ಯಲಹಂಕ, ಸೆ. 20: ವಿಶ್ವವಿದ್ಯಾಲಯದ ಸಮೀಪ ಆರಂಭಿಸಿರುವ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಒತ್ತಾಯಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತ ಸಂಘಟನೆಗಳು ಪ್ರಸಿಡೇನ್ಸಿ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಯಲಹಂಕ ರಾಜಾನುಕುಂಟೆ- ಕಾಕೋಳು ಮುಖ್ಯರಸ್ತೆಯ ಪ್ರಸಿಡೆನ್ಸಿ ವಿಶ್ವವಿದ್ಯಾಲಯ ಸಮೀಪ ಬಾರ್ ಅಂಗಡಿ ತೆರೆಯಲಾಗಿದೆ. ಸ್ಥಳೀಯ ಪರಿಸರ ಹಾಳಾಗುವುದರ ಜೊತೆಯಲ್ಲಿ ಯವಜನರನ್ನು ದುಷ್ಚಟಕ್ಕೆ ಒಳಪಡಿಸುತ್ತಿರುವುದನ್ನು ಖಂಡಿಸಿದ್ದಾರೆ.

ಕಾನೂನು ನಿಯಮಾವಳಿಯನ್ನು ಗಾಳಿಗೆ ತೂರಿ ಅನಧಿಕೃತವಾಗಿ ತೆರೆದಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಕೂಡಲೇ ಮುಚ್ಚಬೇಕೆಂದು ಧರಣಿನಿರತರು ಪಟ್ಟು ಹಿಡಿದರು.

ರೈತ ಹೋರಟಗಾರ ಹಾಗೂ ಬಿಜೆಪಿ ಮುಖಂಡ ಕಡತನ ಮಲೆ ಮಹೇಶ್ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ವಿವಿ ವ್ಯಾಪ್ತಿಯಲ್ಲಿ ಬಾರ್ ತೆರೆದಿರುವುದು ಕಾನೂನು ಬಾಹೀರವಾಗಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುರುದ್ದೇಶ ಹೊಂದಾಲಗಿದೆ ಎಂದು ಆರೋಪಿಸಿದರು.

ಗ್ರಾಮೀಣ ಪರಿಸರ ಹಸಿರು ವಲಯದಲ್ಲಿ ಯಾವುದೇ ಭೂ ಪರಿವರ್ತನೆ ಮಾಡದೆ ಕಾನೂನು ಬಾಹಿರ ಹೋಟೆಲ್ ಸ್ಥಾಪನೆ ಕಾನೂನು ಬಾಹೀರ ಎಂದ ಅವರು ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ತೊಂದರೆಯಾಗುತ್ತಿದೆ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ಬಾರ್ ಪ್ರಾರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಗಾಂಜಾ, ಅಫೀಮು, ಡ್ರಗ್ಸ್ ಮಾಫಿಯಾ ತಲೆ ಎತ್ತುವ ಭೀತಿ ಎದುರುಸುತ್ತಿದ್ದರೆ. ಈ ಬಾಗದ ಜನತೆ ಹಾಗಾಗಿ ಕೂಡಲೇ ಬಾರ್ ಅಂಡ್ ರೆಸ್ಟೋರೆಂಟ್ ನ್ನು ಕೂಡಲೇ ತೆರವುಗೊಳಿಸ ಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಯಲಹಂಕ ತಹಸಿಲ್ದಾರ್ ರಘುಮೂರ್ತಿ ಆಗಮಿಸಿ ವಾಸ್ತವವಾಗಿ ಪರಿಶೀಲಿಸಿ ಬಾರ್ ಆರಂಭಿಸಿರುವುದರಿಂದ ನಾಗರೀಕರು, ವಿದ್ಯಾರ್ಥಿಗಳ ಮೇಲಾಗುವ ಪರಿಣಾಮವನ್ನು ಖದ್ದಾಗಿ ವೀಕ್ಷಣೆ ಮಾಡಿ ಕಾನೂನು ಸ್ಪಷ್ಟ ಉಲ್ಲಂಘನೆ ಮಾಡಿ ಹಸಿರು ವಲಯವನ್ನು ವಾಣಿಜ್ಯವಹಿವಾಟಿಗೆ ಬಳಸಿರುವುದು ಅಪರಾಧವಾಗಿದ್ದು, ತಕ್ಷಣವೇ ಬಾರ್ ಅಂಗಡಿಗೆ ಬೀಗ ಹಾಕಿ ಮುಚ್ಚುವಂತೆ ಆದೇಶಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಇಟಗಲ್ ಪುರ ಮೋಹನ್, ಚಂದ್ರಹಾಸ್ ಸೇರಿದಂತೆ ಸುವರ್ಣ ಜನಶಕ್ತಿ ವೇದಿಕೆಯ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos