ಬೆಂಗಳೂರು ಮತದಾರರ ಮನೆ ಬಾಗಿಲಿಗೆ ಮತದಾರರ ಚೀಟಿ…!

ಬೆಂಗಳೂರು ಮತದಾರರ ಮನೆ ಬಾಗಿಲಿಗೆ ಮತದಾರರ ಚೀಟಿ…!

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಇದೇ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಮತ ಚಲಾಯಿಸುವ ಅರ್ಹ ಮತದಾರರ ಮನೆ ಬಾಗಿಲಿಗೆ ಭಾವಚಿತ್ರವುಳ್ಳ ವೋಟರ್‍ಸ್ಲಿಪ್‍ಗಳನ್ನು ತಲುಪಿಸಲು ಪಾಲಿಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ನಗರ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏ.5ರಿಂದ ಪ್ರತಿ ಮತದಾರರ ಮನೆಗೂ ಭಾವಚಿತ್ರವುಳ್ಳ ಗುರುತಿನಚೀಟಿಯನ್ನು ತಲುಪಿಸಲಾಗುವುದು.ಇದರ ಜೊತೆಗೆ ವೋಟರ್‍ಸ್ಲಿಪ್ ಹಾಗೂ ಚುನಾವಣಾ ಕೈಪಿಡಿಯನ್ನು ನೀಡಲಾಗುವುದು. ಇದಕ್ಕಾಗಿ 8500 ಪಿಎಲ್‍ಒ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ವೋಟರ್ ಐಡಿಯಲ್ಲಿರುವಂತೆ ಹೆಸರು, ಫೋಟೋ, ವಿಳಾಸ ಹಾಗೂ ವಯಸ್ಸು, ವಾರ್ಡ್ ಸಂಖ್ಯೆ ಇತರೆ ಮಾಹಿತಿಗಳು ಒಳಗೊಂಡಿರುತ್ತದೆ. ಏ.11ರೊಳಗೆ ಮತದಾರರ ಗುರುತಿನ ಚೀಟಿ ಮನೆಗಳಿಗೆ ತಲುಪಿದೆ ಎಂದರು. ನಗರದಲ್ಲಿ 90,83,554 ಮತದಾರರು ಇದ್ದು, ಇದರಲ್ಲಿ 47,33,562 ಪುರುಷ ಮತದಾರರು,43,48,452 ಮಹಿಳಾ ಮತದಾರರು ಇದ್ದಾರೆ. 1450 ಇತರೆ ಮತದಾರರು ಇದ್ದಾರೆ. ವಿಶೇಷವೇನೆಂದರೆ 28 ಲಕ್ಷಕ್ಕೂ ಹೆಚ್ಚು ಯುವ ಮತದಾರರು ಎಂದು ವಿವರಿಸಿದರು.

ಬೆಂಗಳೂರು ಉತ್ತರದಿಂದ 31 ಅಭ್ಯರ್ಥಿಗಳು, ಕೇಂದ್ರದಿಂದ 22 ಅಭ್ಯರ್ಥಿಗಳು, ದಕ್ಷಿಣದಿಂದ 25ಅಭ್ಯರ್ಥಿಗಳು ಕಣದಲ್ಲಿದ್ದು 18ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಪಾಲಿಕೆ ವ್ಯಾಪ್ತಿಗೆ ಬರಲಿದ್ದು, ನ್ಯಾಯಸಮ್ಮತ, ನಿರ್ಭೀತಿ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಸಿ ವಿಜûಲ್ ಆ್ಯಪ್‍ನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದೂರು ಸಲ್ಲಿಸಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos