ಬಾಳೆಹೂವಿನಲ್ಲಿರುವ ಔಷಧೀಯ ಗುಣಗಳನ್ನು ತಿಳಿಯಿರಿ

ಬಾಳೆಹೂವಿನಲ್ಲಿರುವ ಔಷಧೀಯ ಗುಣಗಳನ್ನು ತಿಳಿಯಿರಿ

ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ. ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು.

ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ. ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ.  ಇದರಲ್ಲಿರುವ  ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. ಆಂಟಿ ಆಕ್ಸಿಡೆಂಟ್, ಕ್ಯಾನ್ಸರ್ ಗೆ ಕಾರಣವಾಗುವ ಕಲುಷಿತ ಅಂಶಗಳನ್ನು ತೊಲಗಿಸುತ್ತದೆ.

ಬಾಳೆ ಹೂವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸುತ್ತದೆ.

ಬಾಳೆ ಹೂವುಗಳ ಸಾಂಬಾರನ್ನು ಉಪಯೋಗಿಸುವುದರಿಂದ ಮಹಿಳೆಯರ ಅನೇಕ ಋತುಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಎದೆ ಹಾಲು ಹೆಚ್ಚಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos