‘ಬಾಕಿ’ ಉಳಿಸಿಕೊಂಡ ‘ಖಾಸಗಿ ಕಾಲೇಜು’ಗಳಿಗೆ ಸರ್ಕಾರದ ‘ಲಾಸ್ಟ್’ ವಾರ್ನಿಂಗ್..!

‘ಬಾಕಿ’ ಉಳಿಸಿಕೊಂಡ ‘ಖಾಸಗಿ ಕಾಲೇಜು’ಗಳಿಗೆ ಸರ್ಕಾರದ ‘ಲಾಸ್ಟ್’ ವಾರ್ನಿಂಗ್..!

ಬೆಂಗಳೂರು, ಮೇ.18, ನ್ಯೂಸ್‍ಎಕ್ಸ್ ಪ್ರೆಸ್‍: ರಾಜ್ಯದ ಪ್ರತಿಷ್ಠಿತ ಕಾಲೇಜುಗಳಾದ ಜ್ಯೋತಿನಿವಾಸ್ ಕಾಲೇಜು, ಕ್ರೈಸ್ಟ್ ಯೂನಿವರ್ಸಿಟಿ, ಸಂತ ಜೋಸೆಫರ ಕಲಾ ಮತ್ತು ವಿಜ್ಞಾನ ಕಾಲೇಜು, ಸಂತ ಜೋಸೆಫರ ಸಂಜೆ ಕಾಲೇಜು, ಸಂತ ಜೋಸೆಫರ ವಾಣಿಜ್ಯ ಕಾಲೇಜು ಮುಂತಾದ ಯೂನಿವರ್ಸಿಟಿ, ಕಾಲೇಜುಗಳು ತುಂಬಾ ‘ಸಂಪದ್ಬರಿತ ಸಂಸ್ಥೆ’ಗಳೆಂದು ಹೆಸರು ಪಡೆದಿವೆ. ಇಂತಹುದರಲ್ಲಿ ನಾನಾ ಹೆಸರಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕವನ್ನು ಕಟ್ಟಿಸಿಕೊಂಡು ಇತ್ತ ವಿದ್ಯಾರ್ಥಿಗಳನ್ನು ಅತ್ತ ಸರ್ಕಾರವನ್ನು ವಂಚಿಸುತ್ತಾ, ಹಗಲು ದರೋಡೆ ಮಾಡಿ ಗುಳುಂ ಮಾಡಿರುವಂತಹ ದರಿದ್ರ ಸ್ಥಿತಿಗೆ ತಲುಪಿವೆ!

ಸೇಂಟ್‍ ಜೋಸೆಫ್‍ ಕಾಲೇಜು

ಕ್ರೈಸ್ಟ್ ಯೂನಿರ್ವಸಿಟಿ

ಜ್ಯೋತಿ ನಿವಾಸ ಕಾಲೇಜು

ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದಿರುವ, ಪಡೆಯುತ್ತಿರುವ ಈ ಕಾಲೇಜುಗಳು ಖಾಸಗಿ ಅನುದಾನಿತ ಕಾಲೇಜುಗಳು ಎಂದು ಪರಿಗಣಿತವಾಗಿವೆ. ಇವುಗಳ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಬಗೆದ ದ್ರೋಹದ ತಾಜಾ ಉದಾಹರಣೆಯೆಂದರೆ, ತಮ್ಮ ತಮ್ಮ ಕಾಲೇಜುಗಳ ವಿದ್ಯಾರ್ಥಿಗಳಿಂದ ದುಪ್ಪಟ್ಟು ದರದಲ್ಲಿ ವಸೂಲಿ ಮಾಡಿರುವ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕಗಳನ್ನು ದಶಕಗಳ ಕಾಲ ಸರ್ಕಾರದ ಜಂಟಿ ಖಾತೆಗೆ ವರ್ಗಾಯಿಸದೆ ವಂಚಿಸುತ್ತಿರುವುದು. ಕಳೆದ 2004-05 ನೇ ಸಾಲಿನಿಂದ 2014-15-ನೇ ಸಾಲಿನವರೆಗೆ ವಿದ್ಯಾರ್ಥಿಗಳಿಂದ ದುಪ್ಪಟ್ಟು ದರದಲ್ಲಿ ವಸೂಲಿ ಮಾಡಿದ ಶುಲ್ಕ ಕ್ರಮವಾಗಿ, ರೂ. 61,94,566, ರೂ. 1,22,19087, ರೂ. 14,35,028, ರೂ. 30,42,192, ರೂ. 44,51,871, ರೂ. 61,94,566 ಹೀಗೆ ಜಮಾ ಮಾಡಬೇಕಿರುವ ಕೋಟ್ಯಂತರ ಹಣದಲ್ಲಿ ಒಂದು ನಯಾ ಪೈಸೆಯನ್ನೂ ಸಹ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತಿವೆ!

ಈಗಾಗಲೇ ಡೊನೇಷನ್, ಅನುದಾನ, ವಾಹನ, ಯೂನಿಫಾರ್ಮ್, ಸ್ಟಡಿ ಮೆಟೀರಿಯಲ್, ಇಂಟೆಗ್ರೇಟೆಡ್ ಕೋರ್ಸ್ ಮುಂತಾದವುಗಳ ಹೆಸರಿನಲ್ಲಿ ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿರುವ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ದುಪ್ಪಟ್ಟು ದರದಲ್ಲಿ ಹತ್ತಾರು ವರ್ಷಗಳಿಂದ ವಸೂಲಿ ಮಾಡಿರುವ ಶುಲ್ಕವನ್ನು ಸಹ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡುತ್ತಿದೆ, ಸರ್ಕಾರದ ಯಾವ ಆದೇಶಗಳಿಗೂ, ಜ್ಞಾಪನಪತ್ರಗಳಿಗೆ ಕ್ಯಾರೆ ಎನ್ನದ ಇಂತಹ ಆಡಳಿತ ಮಂಡಳಿಗಳ ನಡವಳಿಕೆಯಿಂದ ಸರ್ಕಾರವು ಅನಿವಾರ್ಯವಾಗಿ ಸಿಬ್ಬಂದಿಯ ವೇತನಾನುದಾನದಲ್ಲಿ ಕಡಿತ ಮಾಡುವ ಪರಿಸ್ಥಿತಿಯನ್ನು ತಂದೊಡ್ಡಿದೆ. ತಾವಾಯಿತು ತಮ್ಮ ಪಾಡಾಯಿತು ಎಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನಕ್ಕೂ ಈ ಲೂಟಿಕೋರ ಆಡಳಿತ ಮಂಡಳಿಗಳು ಸಂಚಕಾರ ತಂದೊಡ್ಡಿದೆ. ಸಂಬಳವನ್ನೆ ನಂಬಿ ಬದುಕುತ್ತಿರುವ ಸಾವಿರಾರು ಜನ ಸಿಬ್ಬಂದಿಯ ಜೀವನಕ್ಕೆ ಕೊಳ್ಳಿ ಇಟ್ಟು, ಬೀದಿಪಾಲು ಮಾಡುವ ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವವರಿಲ್ಲವೇ ಎಂಬುದೇ ಸದ್ಯದ ಪ್ರಶ್ನೆಯಾಗಿದೆ. ಬಗೆದಷ್ಟೂ ಆಳ ಎಂಬಂತೆ ಇಂತಹ ಸ್ಕ್ಯಾಂಡಲ್‍ಗಳಲ್ಲಿ ಭಾಗಿಯಾಗಿರುವ ಇನ್ನೂ ಹಲವಾರು ಯೂನಿವರ್ಸಿಟಿ, ಕಾಲೇಜುಗಳ ಪಟ್ಟಿ ಬೆಳೆಯುತ್ತಲೇ ಇದೆ.

ಬೋಧನಾ ಶುಲ್ಕ ಹಾಗೂ ಪ್ರಯೋಗಾಲಯ ಶುಲ್ಕ ಬಾಕಿ ಉಳಿಸಿಕೊಂಡಿರೋ ಕಾಲೇಜುಗಳಿಗೆ ಸರ್ಕಾರ ಕೊನೆಯ ಗಡುವು ನೀಡಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಬಾಕಿ ಉಳಿಸಿಕೊಂಡಿರುವ ಬೋಧನಾ ಶುಲ್ಕ ಹಾಗೂ ಪ್ರಯೋಗಾಲಯ ಶುಲ್ಕದ ದುಪ್ಪಟ್ಟು ಹಣವನ್ನು 7 ದಿನಗಳಲ್ಲಿ ‘ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ’ ಜಂಟಿ ಖಾತೆಗೆ ಜಮಾ ಮಾಡಲು ಖಡಕ್‍ ಸೂಚನೆ ನೀಡಿದೆ. ಒಂದು ವೇಳೆ 7 ದಿನದೊಳಗೆ ಹಣ ಜಮಾ ಮಾಡದ ಖಾಸಗಿ ಅನುದಾನಿತ ಕಾಲೇಜುಗಳ ವೇತನಾನುಧನವನ್ನು ತಡೆಯಲು ಸರ್ಕಾರ ತೀರ್ಮಾನಿಸಿದೆ.

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos