ಭ್ರಷ್ಟ ರಾಜಕಾರಣಿಗಳು ಬಯಲಾಗಲಿ

ಭ್ರಷ್ಟ ರಾಜಕಾರಣಿಗಳು ಬಯಲಾಗಲಿ

ಬೆಂಗಳೂರು, ಸೆ. 5: ಪ್ರಸ್ತುತ ಅತ್ಯಂತ ಚರ್ಚೆ ಮತ್ತು ರಾಜ್ಯ ಹಾಗೂ ದೇಶದಲ್ಲಿ ಡಿಕೆಶಿ ಅವರ ಬಂಧನವೇ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಗಂಭೀರ ಸ್ವರೂಪದ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಗಳ ನೆಟ್ಟಿಗರು ತರಹೇವಾರಿ ಪ್ರತಿಕ್ರಯೆಗಳನ್ನು ಹರಿ ಬಿಡುತ್ತಿದ್ದಾರೆ. ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿ ಬಂಧನದ ಕುರಿತಾಗಿ ಪರ ವಿರೋಧ ಮತ್ತು ಸಮಚಿತ್ತದ ಅನಿಸಿಕೆಗಳು ಹರಿದು ಬರುತ್ತಿವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಬಂಶಿಸಲಾಗಿದೆ ಎಂಬ ಕಾಂಗ್ರೆಸ್ ಅಭಿಮಾನಿಗಳ ಅಭಿಪ್ರಾಯಗಳಿಗೆ ಬಿಜೆಪಿಯ ಬೆಂಬಲಿಗರು ಕೌಂಟರ್ ಮಾಡಿದ್ದಾರೆ. ಬಿಜೆಪಿಯ ಜನಾರ್ಧನ ರೆಡ್ಡಿ, ಬಿಎಸ್ ವೈ, ಶಾ ಬಂಧನವಾಗಿದ್ದಾಗ ಸಂಸ್ಥೆಗಳ ಸದ್ಬಳಕೆಯಾಗಿದ್ದವೆ ಎಂದು ಕಾಲೆಳೆದಿದ್ದಾರೆ. ಭ್ರಷ್ಟಾಚಾರ ಮುಖವಾಡ ಬೆತ್ತಲಾಗಿ ಬಂಧನವಾಗಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲಿ ಎಂಬುದು ನೆಟ್ಟಿಗರ ಅಭಿಪ್ರಾಯ.
ರಾಜಕೀಯ ಕುತಂತ್ರವಿಲ್ಲ
ಅಮಿತ್ ಶಾ, ಯಡಿಯೂರಪ್ಪ ಬಂಧನವಾದರೆ ಈ ನೆಲದ ಕಾನೂನಿನ ಶಕ್ತಿ. ಅದೇ ಡಿಕೆಶಿ ಮತ್ತು ಚಿದಂಬರಂ ಅರೆಷ್ಟ್ ಆದರೆ ರಾಜಕೀಯ ಸೇಡು ಕುತಂತ್ರ ಎನ್ನುವುದೆಷ್ಟು ಸರಿ ಎಂದು ಪುಷ್ಪಲತಾ ಲೇವಡಿ ಮಾಡಿದ್ದಾರೆ. ಕೊನೆಗೂ ಡಿಕೆ ಕಾನೂನಿನ ಬಲೆಗೆಬಿದ್ದಿದ್ದಾರೆ. ಮುಚ್ಚಿಡುವುದು ನಿಮ್ಮ ಬಳಿ ಏನೂ ಇಲ್ಲ ಎಂದಮೇಲೆ ಕಾನೂನಿಗೆ ಹೆದರುವುದೇಕೆ? ಸೇಡಿನ ರಾಜಕಾರಣ ಕುತಂತ್ರ ಅಂತೆಲ್ಲಾ ಕಾಮೆಂಟ್ ಮಾಡುವುದೇಕೆ ? ಎಂದು ಪ್ರಶಾಂತ್ ಎಂಬಾತ ಕಾಂಗ್ರೆಸ್ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ.
ತೇಜೋವಧೆ, ಬ್ಲಾಕ್ ಮೇಲೆ ಮತ್ತು ಬೆದರಿಕೆ ಹಾಕುವ ದುರುದ್ದೇಶದಿಂದ ಮೋದಿ ಸರ್ಕಾರ ಪ್ರತಿ ಪಕ್ಷಗಳ ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಬಂಧಿಲಾಗುತ್ತಿದೆ. ಆದರೆ, ಡಿಕೆಶಿ ಬೆನ್ನಿಗೆ ನಾವಿದ್ದೇವೆ ಎಂದು ಗಗನ್ ಎಂಬಾತ ಬಿಜೆಪಿ ಅಭಿಮಾನಿಗಳಿಗೆ ಖಾರವಾಗಿ ಉತ್ತರಿಸಿದ್ದಾರೆ.
ಜವಾಬ್ದಾರಿಯುತ ಸಂಸ್ಥೆಗಳ ಮೂಲಕ ಪಕ್ಷ ನಿಷ್ಟ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ಸಂಪೂರ್ಣ ಸೇಡಿನ ರಾಜಕಾರಣ ಮಾಡುತ್ತಿರುವುದೆ ಇದಕ್ಕೆ ಸಾಕ್ಷಿ ಎಂದು ರಾಜಶೇಖರ್ ಆರೋಪ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ ಡಿಕೆಶಿ ಯವರನ್ನು ಬಂಧಿಸಿದೆ ಇದರಿಂದ ಮುಜುಗರ ಪಡುವವರು ದಯವಿಟ್ಟು ಸಾರ್ವಜನಿಕವಾಗಿ ಮರುಗಬೇಡಿ. ನಮ್ಮ ರಾಜ್ಯದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಎಲ್ಲಾ ರೀತಿಯ ಎಲ್ಲೆಗಳನ್ನು ಮೀರಿದೆ.ಮೂರು ಪಕ್ಷಗಳ ಪ್ರಮುಖ ರಾಜಕಾರಣಿಗಳು ಒಬ್ಬರನ್ನೊಬ್ಬರು ಮೀರಿಸುವಷ್ಟು ಭ್ರಷ್ಟರು, ಲಂಪಟರು, ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರೂ, ಹಲವು ರೀತಿಯ ಅಕ್ರಮಗಳಲ್ಲಿ ಬಾಗಿಯಾಗಿ ಬಚಾವಾಗುವುದರಲ್ಲೂ ನಿಸ್ಸೀಮರು ಎಂದು ಸಾಮಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಮೂರು ಪಕ್ಷಗಳ ರಾಜಕಾರಣಿಗಳಿಗೂ ತರಾಟಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಇಳಿದಾಯ್ತು,ಯಡಿಯೂರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನು ಸ್ಥಿತಿ.ಸಿದ್ದಾರ್ಥ ಬಂಧನ ಭೀತಿಯಿಂದ ಕೊನೆಯಾದರು. ಈಗ ಅತ್ಯಂತ ಪ್ರಬಲ ಪ್ರಭಾವಿಗೆ ಬಲೆ ಹಾಕಿದ್ದಾಯ್ತು.ಕರ್ನಾಟಕದ ಲೀಡರ್ ಗಳೆಲ್ಲ ಮೂಲೆಗೆ ? ಹಾಗಾದರೆ ಇನ್ಯಾರಿಗೆ ಪಟ್ಟ ಎಂದು ಬಿಜೆಪಿ, ಕಾಂಗ್ರೆಸ್,ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಮೂಗು ಮುರಿಯವಂತೆ ಲೇವಡಿ ಮಾಡಿದ್ದಾರೆ.
ಬಿಜೆಪಿ ಸೇರಿ ಡಿಸಿಎಂ ಆಗುವ ಅವಕಾಶವನ್ನು ಕಾಲಿನಿಂದ ಒದ್ದು ಇಡಿ ಎಂಬ ಚೇಳಿನಕೊಂಡಿಯ ಜೈಲು ಕಂಬಿ ಎಣಿಸುವಂತಾಯ್ತು ಡಿಕೆಶಿ ಪಾಡು ಎಂದು ಮರಿಹೊನ್ನೇಗೌಡ ಮರುಕ ವ್ಯಕ್ತ ಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos