ಪಾಕೆಟ್ ‘ಜ್ಯೂಸ್’ ಸೇವನೆಯಿಂದ ಅಪಾಯ ನಿಶ್ಚಿತ

ಪಾಕೆಟ್ ‘ಜ್ಯೂಸ್’ ಸೇವನೆಯಿಂದ ಅಪಾಯ ನಿಶ್ಚಿತ

ಮಾರುಕಟ್ಟೆಯಲ್ಲಿ ಸಿಗುವ ಪಾಕೆಟ್ ಹಣ್ಣಿನ ಜ್ಯೂಸ್ ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಇದರ ಜೊತೆ ಪೋಷಕಾಂಶ ಕೂಡ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಪಾಕೆಟ್ ಜ್ಯೂಸ್ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಇನ್ನೂ ಪಾಕೆಟ್ ನಲ್ಲಿ ಸಿಗುವ ಹಣ್ಣಿನ ಜ್ಯೂಸ್ ನೀವು ಅಥವಾ ನಿಮ್ಮ ಮಕ್ಕಳು ಕುಡಿಯುತ್ತಿದ್ದರೆ ಈಗ್ಲೇ ಎಚ್ಚೆತ್ತುಕ್ಕೊಳ್ಳಿ.

ಅಮೆರಿಕಾದಲ್ಲಿ ಮಾರಾಟವಾಗುವ 45 ಪ್ರಸಿದ್ಧ ಕಂಪನಿಗಳ ಪಾಕೆಟ್ ಜ್ಯೂಸ್ ಪರೀಕ್ಷೆಯ ವರದಿ ಹೊರ ಬಿದ್ದಿದೆ. ಈ ಜ್ಯೂಸ್ ನಲ್ಲಿ ಕ್ಯಾಡ್ಮಿಯಮ್, ಅಜೈವಿಕ ಆರ್ಸೆನಿಕ್ ಮತ್ತು ಸೀಸದ ಅಂಶವಿರುವುದು ಕಂಡು ಬಂದಿದೆ.

ಅಧ್ಯಯನಕ್ಕೆ ಪ್ರಸಿದ್ಧ ಕಂಪನಿಗಳ ಜ್ಯೂಸ್ ಬಳಸಿಕೊಳ್ಳಲಾಗಿದೆ. ಅರ್ಧದಷ್ಟು ಜ್ಯೂಸ್ ಗಳಲ್ಲಿ ಮೆಟಲ್ ಅಂಶವಿರುವುದು ಪತ್ತೆಯಾಗಿದೆ. ಸುಮಾರು 7 ಕಂಪನಿ ಜ್ಯೂಸ್ ನಲ್ಲಿ ಅತಿ ಹೆಚ್ಚು ಮೆಟಲ್ ಅಂಶ ಕಂಡು ಬಂದಿದೆ. ಅರ್ಧ ಕಪ್ ನಷ್ಟು ಜ್ಯೂಸನ್ನು ಒಂದು ದಿನಕ್ಕೆ ಮಗು ಸೇವನೆ ಮಾಡಿದ್ರೂ ಅಪಾಯ ನಿಶ್ಚಿತ. ಈ ಜ್ಯೂಸ್ ಮಕ್ಕಳ ಬೆಳೆಯುತ್ತಿರುವ ಮೆದುಳು ಹಾಗೂ ನರಮಂಡಲಗಳ ಮೇಲೆ ಪರಿಣಾಮ ಬೀರುತ್ತದೆಯಂತೆ. ಜ್ಯೂಸ್ ನಲ್ಲಿ ವಿಷಕಾರಿ ಅಂಶ ತೆಗೆಯುವುದು ಕಷ್ಟ. ಹಾಗಾಗಿ ಇಂತಹ ಜ್ಯೂಸ್ ಸೇವನೆ ಬಿಟ್ಟುಬಿಡಿ ಎಂದು ಅಧ್ಯಯನ ನಡೆಸಿದ ಸಂಸ್ಥೆ ಸಲಹೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos