ಪ್ರಜ್ಞಾಹೀನನಾಗಿ 40 ನಿಮಿಷ ಹಾರಾಟ ನಡೆಸಿದ ಪೈಲಟ್!

ಪ್ರಜ್ಞಾಹೀನನಾಗಿ 40 ನಿಮಿಷ ಹಾರಾಟ ನಡೆಸಿದ ಪೈಲಟ್!

ಅಡಿಲೇಡ್, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಆಹಾರ ಸೇವಿಸದೇ ವಿಮಾನ ಹಾರಾಟ ನಡೆಸಲು ಹೋಗಿದ್ದ ತರಬೇತಿ ಪೈಲೆಟ್ ಸುಮಾರು 40 ನಿಮಿಷ‌ ಅರೆಪ್ರಜ್ಞಾಹೀನ ‌ಪರಿಸ್ಥಿತಿಯಲ್ಲಿ‌ ಓಡಿಸಿರುವ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಆಸ್ಟ್ರೇಲಿಯಾ ಸಾರಿಗೆ ಸುರಕ್ಷಿತ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಮಾಡಿದ್ದು, ಮಾ. 9 ರಂದು ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಪ್ರಜ್ಞಾಹೀನ ಪರಿಸ್ಥಿತಿಯಲ್ಲಿದ್ದ ಪೈಲೆಟ್‌ ಹಾರಾಟಕ್ಕೆ ಮೊದಲು ಕೇವಲ ಚಾಕಲೇಟ್, ಎನರ್ಜಿ ಡ್ರಿಂಕ್ಸ್ ಹಾಗೂ ನೀರನ್ನು ಮಾತ್ರ ಸೇವಿಸಿದ್ದರು ಎಂದು ತಿಳಿದುಬಂದಿದೆ. ಸಿಂಗಲ್ ಎಂಜಿನ್ ವಿಮಾನವನ್ನು ಹಾರಾಟ ನಡೆಸುವಾಗ ಈ‌ ಘಟನೆ ನಡೆದಿದೆ‌.

ಸುಮಾರು 5500 ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗ ಇದ್ದಕ್ಕಿದ್ದಂತೆ ಪ್ರಜ್ಞಾಹೀನ ಪರಿಸ್ಥಿತಿಗೆ ಜಾರಿದ್ದಾನೆ. ಈ‌ ವೇಳೆ ಕಂಟ್ರೋಲ್ ರೂಂನಿಂದ ಹಲವು ಬಾರಿ ಪೈಲೆಟ್ ಸಂರ್ಪಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ಇನ್ನೊಂದು‌ ವಿಮಾನದ ಮೂಲಕ‌ ಪ್ರಯತ್ನಿಸಿದಾಗ, ಪ್ರಜ್ಞೆ ಬಂದಿದೆ ಎಂದು ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos